ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪೆರ್ಡೂರು : ಕುಲಾಲ ಸಂಘದ ಮಹಿಳಾ ಘಟಕದ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮ

Posted On: 03-08-2021 09:37PM

ಉಡುಪಿ : ಪೆರ್ಡೂರು ಕುಲಾಲ ಸಂಘದ ಆವರಣದಲ್ಲಿ ಮಹಿಳಾ ಘಟಕದ ಸದಸ್ಯರುಗಳು ಸಿದ್ದಪಡಿಸಿದ ತುಳುನಾಡಿನ ಆಟಿ ತಿಂಗಳಿನ ವಿವಿಧ ಬಗೆಯ ಸುಮಾರು 18 ಬಗೆಯ ಖಾದ್ಯ, ತಿನಿಸುಗಳ ಸವಿಯನ್ನು ವಿಶೇಷವಾಗಿತ್ತು.

ಕೊರೊನಾ ಕಾರಣಗಳಿಂದಾಗಿ ಈ ಕಾರ್ಯಕ್ರಮವನ್ನು ಕುಲಾಲ ಸಂಘದ ಕಾರ್ಯಕಾರಿ ಮಂಡಳಿ, ಮಹಿಳಾ ಘಟಕ ಮತ್ತು ಸೇವಾದಳ ಸದಸ್ಯರುಗಳಿಗಾಗಿ ಸೀಮಿತಗೊಳಿಸಲಾಗಿತ್ತು.

ಖಾದ್ಯ ತಯಾರಿಸಿ, ಅಚ್ಚುಕಟ್ಟಾದ ಸರಳ ಕಾರ್ಯಕ್ರಮ ಸಂಘಟಿಸಿದ ಮಹಿಳಾ ಘಟಕ ಸರ್ವರ ಮೆಚ್ಚಗೆಗೆ ಪಾತ್ರವಾಯಿತು. ಈ ಸಂದರ್ಭ ಸಂಘದ ಕಾರ್ಯಕಾರಿ ಮಂಡಳಿ, ಮಹಿಳಾ ಘಟಕ ಮತ್ತು ಸೇವಾದಳ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.