ಕಲ್ಯಾಣಪುರ ರೋಟರಿ ವತಿಯಿಂದ ಕೆಳಾರ್ಕಳಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ದೇಣಿಗೆ
Posted On:
13-08-2021 06:41PM
ಉಡುಪಿ : ಕಲ್ಯಾಣಪುರ ರೋಟರಿ ವತಿಯಿಂದ ಕಲ್ಯಾಣಪುರ ಸಮೀಪದ ಕೆಳಾರ್ಕಳಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ರೋಟರಿ ಸದಸ್ಯ, ದಾನಿ, ಶಾಲೆಯ ಹಿತೈಷಿ ಸಮಿತಿಯ ಅಧ್ಯಕ್ಷ ಸಂಜೀವ ಟಿ. ಅವರು ನೀಡಿದ ₹ 25,000 ದೇಣಿಗೆಯನ್ನು ಕಲ್ಯಾಣಪುರ ರೋಟರಿಯ ಅಧ್ಯಕ್ಷ ಶಂಭು ಶಂಕರ್ ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಇವರಿಗೆ ಹಸ್ತಾಂತರಿಸಿದರು.
ವಲಯ ಸೇನಾನಿ ಬ್ರ್ಯಾನ್ ಡಿಸೋಝ, ಚಾರ್ಲೊಟೆ ಲೂಯಿಸ್, ರವಿ ಆಚಾರ್, ಲಿಯೋ ಅಂದ್ರಾದೆ, ಶಂಕರ ಸುವರ್ಣ ಉಪಸ್ಥಿತರಿದ್ದರು.
ಸಂಜೀವ ಟಿ. ಶಾಲೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಸ್ವಾಗತಿಸಿ, ನಿರೂಪಿಸಿದರು.