ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ : ನೂತನ ಭಗವಧ್ವಜ ಕಟ್ಟೆ ಲೋಕಾರ್ಪಣೆ

Posted On: 13-08-2021 08:48PM

ಕಾಪು : ಇನ್ನಂಜೆ ಗ್ರಾಮ ಹಾಗು ಮಜೂರು ಗ್ರಾಮದ ಗಡಿ ಭಾಗವಾಗಿರುವ ರೆಂಜಾಲ ಪಾದೆಯಲ್ಲಿ ಇಂದು ಯುವಸೇನೆ ಮಡುಂಬು ತಂಡದ ಸದಸ್ಯರ ಸಹಕಾರದಿಂದ ನಿರ್ಮಿಸಲಾದ ನೂತನ ಧ್ವಜ ಕಟ್ಟೆಯನ್ನು ಲೋಕಾರ್ಪಣೆ ಮಾಡಲಾಯಿತು.

ಭಗವಧ್ವಜ ಆರೋಹಣದ ಮೂಲಕ ವಿದ್ವಾನ್ ಮತ್ತು ಜ್ಯೋತಿಷಿ, ಪೇರ್ಮುಂಡೆ, ಬೆಳ್ಳರ್ಪಾಡಿ,ಮಂಗಿಲ್ಲಾರು ದೇವಸ್ಥಾನದ ಪ್ರಧಾನ ತಂತ್ರಿಗಳಾದ ಇನ್ನಂಜೆ ವಿಶ್ವ ಹಿಂದೂ ಪರಿಷತ್ ವಿಷ್ಣು ಘಟಕದ ಅಧ್ಯಕ್ಷರಾದ ಮಡುಂಬು ಕೆ. ಪಿ. ಶ್ರೀನಿವಾಸ ತಂತ್ರಿಯವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಯುವಸೇನೆಯ ಈ ಕಾರ್ಯದಿಂದ ಕುಂಜಾರುಗಿರಿಗೆ ಸಂಬಂಧಪಟ್ಟಿರುವ ಈ ಪವಿತ್ರ ಕ್ಷೇತ್ರ ಮುಂದಿನ ದಿನಗಳಲ್ಲಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಧ್ವಜ ಕಟ್ಟೆಗೆ ಪುಷ್ಪ ಸಮರ್ಪಿಸುವುದರೊಂದಿಗೆ ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ (ಸ್ವಯಂ ಸೇವಕರಾದ) ವರುಣ್ ಬಂಟಕಲ್ಲ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು.

ಮುಖ್ಯ ಅತಿಥಿಯಾಗಿ ಉಡುಪಿ ಚಂದ್ರಮೌಲೀಶ್ವರ ದೇವಸ್ಥಾನದ ತಂತ್ರಿಗಳಾದ ಮನೋಹರ ತಂತ್ರಿ ಉಡುಪಿ, ಉಂಡಾರು ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾದ ಶ್ರವಣ್ ಭಟ್ ಮತ್ತು ನಾಗಭೂಷಣ್ ಭಟ್ ಕಾಪು, ಯುವಸೇನೆ ಮಡುಂಬು ತಂಡದ ಅಧ್ಯಕ್ಷರಾದ ವರುಣ್ ಶೆಟ್ಟಿ ಮಡುಂಬು, ಸ್ಥಳೀಯ ಗ್ರಾ. ಪಂ ಸದಸ್ಯರು ಹಾಗೂ ಯುವಸೇನೆ ಮಡುಂಬು ತಂಡದ ಸದಸ್ಯರಾದ ನಿತೇಶ್ ಸಾಲ್ಯಾನ್ ಕಲ್ಯಾಲು, ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರು ಹಾಗೂ ಇನ್ನಂಜೆ ಗ್ರಾ. ಪಂ ಸದಸ್ಯರಾದ ದಿವೇಶ್ ಶೆಟ್ಟಿ ಕಲ್ಯಾಲು, ಇನ್ನಂಜೆ ಗ್ರಾ. ಪಂ ಸದಸ್ಯೆ ಸವಿತಾ ಸುರೇಶ್ ಶೆಟ್ಟಿ, ಇನ್ನಂಜೆ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಮಂಡೇಡಿ, ಬಾಲಕೃಷ್ಣ ಕೋಟ್ಯಾನ್ ಕಲ್ಯಾಲು, ಸುರೇಶ್ ಶೆಟ್ಟಿ ಮಡುಂಬು, ಪ್ರಶಾಂತ್ ಪೂಜಾರಿ ಕಾಪು, ದೀಕ್ಷಾ ತಂತ್ರಿ, ಲತಾ ಸಾಲ್ಯಾನ್ ಹಾಗೂ ಯುವಸೇನೆ ಮಡುಂಬು ತಂಡದ ಸರ್ವಸದಸ್ಯರು ಉಪಸ್ಥಿತರಿದ್ದರು.