ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ : ಸಾರ್ವಜನಿಕ ಶೌಚಾಲಯ ಉದ್ಘಾಟನೆ ಮತ್ತು ಆರ್ಥಿಕ ನೆರವು

Posted On: 15-08-2021 02:46PM

ಕಾಪು : ಯುವಕ ಮಂಡಲ (ರಿ.) ಇನ್ನಂಜೆ ಇವರ ವತಿಯಿಂದ ಇನ್ನಂಜೆ ದಾಸಭವನ ವಠಾರದಲ್ಲಿ ಸಾರ್ವಜನಿಕರಿಗೆ ಉಪಯೋಗಿಸಲು ಸುಸಜ್ಜಿತ ಶೌಚಾಲಯವನ್ನು ಯುವಕ ಮಂಡಲದ ಸದಸ್ಯರೇ ನಿರ್ಮಾಣ ಮಾಡಿ ಇಂದು 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇನ್ನಂಜೆ ಎಸ್.ವಿ. ಎಚ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್ ಉದ್ಘಾಟಿಸಿದರು ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕುಂಜಾರಿನ ಯುವತಿಗೆ ಯುವಕ ಮಂಡಲದ ವತಿಯಿಂದ 10,000 ರೂಪಾಯಿ ಆರ್ಥಿಕ ನೆರವನ್ನು ನೀಡಲಾಯಿತು.

ಇನ್ನಂಜೆ ಗ್ರಾ. ಪಂ. ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ, ವಿ. ಜಿ. ಶೆಟ್ಟಿ, ಬಸ್ರೂರು ರಾಜೀವ ಶೆಟ್ಟಿ, ಯುವಕ ಮಂಡಲದ ಗೌರವ ಸಲಹೆಗಾರರಾದ ಮತ್ತು ರೋಟರಿ ಮಾಜಿ ಗವರ್ನರ್ ನವೀನ್ ಅಮೀನ್ ಶಂಕರಪುರ, ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಕಲ್ಯಾಲು, ರೋಟರಿ ಸಭಾಪತಿ ಮಾಲಿನಿ ಶೆಟ್ಟಿ ಇನ್ನಂಜೆ, ಇನ್ನಂಜೆ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಮಂಡೇಡಿ, ಯುವಕ ಮಂಡಲದ ಕಾರ್ಯದರ್ಶಿ ತರುಣ್ ಕುಮಾರ್ ಇನ್ನಂಜೆ ಶಾಲಾ ಸಿಬ್ಬಂದಿಗಳು, ಯುವಕ ಮಂಡಲ ಮತ್ತು ರೋಟರಿ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.