ಕಾಪು : ರೋಟರಿ ಶಂಕರಪುರ ಇದರ ಅಧ್ಯಕ್ಷರಾದ ರೋ. ಪ್ಲಾವಿಯಾ ಮೆನೆಜಸ್ ಇವರು ಇನ್ನಂಜೆ ರೋಟರಿ ಸಮುದಾಯ ದಳದ ವತಿಯಿಂದ ಮಂಡೇಡಿ ಅಂಗನವಾಡಿಗೆ ನೂತನವಾಗಿ ನಿರ್ಮಿಸಲಾದ ಧ್ವಜಸ್ತಂಭವನ್ನು ಉದ್ಘಾಟಿಸಿ ಮಂಡೇಡಿ ಅಂಗನವಾಡಿಗೆ ಹಸ್ತಾಂತರಿಸಿದರು.
ನಂತರ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ, ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ ಮಂಡೇಡಿ, ಹಾಗೂ ಶ್ರೀದೇವಿ ಭಜನಾ ಮಂಡಳಿ ಅಧ್ಯಕ್ಷರಾದ ಶಿವರಾಮ ಜೆ ಶೆಟ್ಟಿ ಧ್ವಜಾರೋಹಣಗೈದರು.
ಈ ಸಂದರ್ಭದಲ್ಲಿ ರೋಟರಿ ಮಾಜಿ ಗವರ್ನರ್ ರೋ. ನವೀನ್ ಅಮೀನ್ ಶಂಕರಪುರ ಮತ್ತು ಇನ್ನಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ ಶೆಟ್ಟಿ ಮಾತನಾಡಿ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ರೋಟರಿ ವಲಯ 5 ರ ವಲಯ ಸೇನಾನಿ ರೋ ಅನಿಲ್ ಡೇಸಾ, ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಗ್ಲಾಡ್ ಸನ್ ಕುಂದರ್, ರೋಟರಾಕ್ಟ್ ಸುಭಾಸ್ ನಗರ ಅಧ್ಯಕ್ಷರು ಆದ ಕವನ್ ಪೂಜಾರಿ, ವಲಯ 5 ರ ಕಾರ್ಯದರ್ಶಿ ಚಂದ್ರಪೂಜಾರಿ, ರೋ ಸಂದೀಪ್ ಬಂಗೇರ, ಪ್ರಶಾಂತ್ ಶೆಟ್ಟಿ ಮಂಡೇಡಿ, ನಾಗರಾಜ್ ರಾವ್ ಪಾಂಗಾಳ, ಇನ್ನಂಜೆ ಸಿ.ಎ ಬ್ಯಾಂಕ್ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಮಂಡೇಡಿ, ಇನ್ನಂಜೆ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಕಾರ್ಯದರ್ಶಿ ಮನೋಹರ್ ಕಲ್ಲುಗುಡ್ಡೆ, ಸ್ಥಳೀಯ ಪಂಚಾಯತ್ ಸದಸ್ಯರಾದ ಜಯಶ್ರೀ, ದೀವೇಶ್ ಶೆಟ್ಟಿ, ನಿತೇಶ್ ಸಾಲ್ಯಾನ್, ರೋಟರಿ ಪದಾಧಿಕಾರಿಗಳು, ರೋಟರಿ ಸಮುದಾಯದಳ ಪದಾಧಿಕಾರಿಗಳು, ಸದಸ್ಯರು, ಶ್ರೀ ದೇವಿ ಭಜನಾ ಮಂಡಳಿ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಇನ್ನಂಜೆ ಗ್ರಾ. ಪಂ ಸದಸ್ಯೆ ಮತ್ತು ರೋಟರಿ ಸಭಾಪತಿ ಮಾಲಿನಿ ಶೆಟ್ಟಿ ಇನ್ನಂಜೆ ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಚಂದ್ರಹಾಸ್ ಶೆಟ್ಟಿ ಧನ್ಯವಾದಗೈದರು.