ಉಡುಪಿ : ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಯುವಕರು ಮೋಜು-ಮಸ್ತಿ ತಿರುಗಾಟದಲ್ಲಿ ಸಮಯ ವ್ಯರ್ಥ ಮಾಡುವಾಗ ಉಡುಪಿ ಬೊಬ್ಬರ್ಯ ಯುವ ಸೇವಾ ಸಮಿತಿ ಯುವಕರು ಸಮಾಜ ಸೇವೆಯಲ್ಲಿ ಇತರ ಯುವಕರಿಗೆ ಮಾದರಿಯಾಗಿದ್ದಾರೆ.
ಇಂದು ಸ್ವಾತಂತ್ರೋತ್ಸವದ ಪ್ರಯುಕ್ತ ಬೊಬ್ಬರ್ಯ ದೈವಸ್ಥಾನದಲ್ಲಿ ಉಡುಪಿ ಬೊಬ್ಬರ್ಯ ಯುವ ಸೇವಾ ಸಮಿತಿ ವತಿಯಿಂದ ದೈವಸ್ಥಾನ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ, ಅಧ್ಯಕ್ಷರಾದ ವರದರಾಜ್ ಕಾಮತ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮಿತ್ ಶೆಟ್ಟಿ, ವಿಜಯ್, ರವಿ, ದೀಪಕ್, ಅವಿನಾಶ್, ಸುಕೇಶ್ ಹೆಗ್ಡೆ, ಅಕ್ಷಯ್ ಪ್ರಭು ಉಪಸ್ಥಿತಿಯಿದ್ದರು.