ಕಾಪು : ಪಡುಬೆಳ್ಳೆಯ ಯುವಸ್ಫೂರ್ತಿ ಕಲಾ ಮತ್ತು ಕ್ರೀಡಾ ಸಂಘ (ರಿ.) ಇದರ ಪದಗ್ರಹಣ ಕಾರ್ಯಕ್ರಮ ಪಡುಬೆಳ್ಳೆಯಲ್ಲಿ ಜರಗಿತು.
ಇದೇ ಸಂದರ್ಭ ಧರ್ಮಶ್ರೀ ಕಾಲೋನಿಯ ಸರಸ್ವತಿಯವರಿಗೆ ವೈದ್ಯಕೀಯ ಚಿಕಿತ್ಸೆಗೆ 15000 ರೂಪಾಯಿ ನೆರವು ನೀಡಲಾಯಿತು.
ಈ ಸಂದರ್ಭ ಗೌರವಾಧ್ಯಕ್ಷರಾದ ಶಂಕರ್ ಕೋಟ್ಯಾನ್, ಗೌರವ ಸಲಹೆಗಾರರಾದ ನವೀನ್ ಅಮೀನ್, ಗೌರವ ಸಲಹೆಗಾರರು ಮತ್ತು ನಿರ್ದೇಶಕರಾದ ಮಧುಸುದನ್ ರಾವ್, ಲಯನ್ಸ್ ಕ್ಲಬ್ ಅಧ್ಯಕ್ಷರು ಮತ್ತು ಯುವ ಸ್ಪೂರ್ತಿ ಲೆಕ್ಕ ಪರಿಶೋಧಕರು ಅನಿಲ್ ಡಿಸೋಜ, ಸ್ಥಾಪಕಾಧ್ಯಕ್ಷರಾದ ಸಂತೋಷ್ ಕುಲಾಲ್, ಕಾರ್ಯದರ್ಶಿ ಅವಿನಾಶ್ ಆಚಾರ್ಯ,
ಕೋಶಾಧಿಕಾರಿ ಗುರುಪ್ರಸಾದ್ ಆಚಾರ್ಯ,
ನಿಕಟಪೂರ್ವ ಕೋಶಾಧಿಕಾರಿ ಸುಶ್ಮಿತಾ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಜ್ಞ ಸ್ವಾಗತಿಸಿ, ಚೈತ್ರ ನಿರೂಪಿಸಿ, ಸಂಗೀತ ವಂದಿಸಿದರು.