ಮೂತ್ರಪಿಂಡ ಸಮಸ್ಯೆ ಮಹಿಳೆಗೆ ಬಂಟಕಲ್ಲು - ಬಿ.ಸಿ ರೋಡು ಲಯನ್ಸ್ ಕ್ಲಬ್ ನಿಂದ ಆರ್ಥಿಕ ನೆರವು
Posted On:
17-08-2021 01:41PM
ಕಾಪು : ಮೂತ್ರಪಿಂಡ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿರುವ ಪಡುಬೆಳ್ಳೆ ಸಮೀಪದ ರಕ್ಷಾಪುರ ಕಾಲೋನಿಯ ನಿವಾಸಿ ಶಂಕರ ಎಂಬವರ ಪತ್ನಿ ಸರಸ್ವತಿ ಎಂಬವರ ಮೂತ್ರಪಿಂಡ ಬದಲಾಯಿಸುವ ಚಿಕಿತ್ಸೆ ವೆಚ್ಚವಾಗಿ ಲಯನ್ಸ್ ಕ್ಲಬ್ ಬಂಟಕಲ್ಲು ಬಿ.ಸಿ ರೋಡು ಹಾಗೂ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮೀನ್ ರವರು ಜಂಟಿಯಾಗಿ ರೂ. 72000 ವನ್ನು ಅವರ ಮನೆಗೆ ತೆರಳಿ ನೀಡಿದರು.
ಸರಸ್ವತಿ ಅವರ ಈ ಚಿಕಿತ್ಸೆಗೆ ರೂ. 7 ಲಕ್ಷ ಮೊತ್ತ ವೆಚ್ಚವಾಗಲಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಈ ಸಣ್ಣ ಕುಟುಂಬ ಚಿಕಿತ್ಸಾ ವೆಚ್ಚದ ಬಗ್ಗೆ ಸಹೃದಯಿ ದಾನಿಗಳಲ್ಲಿ ವಿನಂತಿಸಿಕೊಂಡಿದ್ದರು. ಇವರ ಸಮಸ್ಯೆಯನ್ನು ತಿಳಿದ ಬಂಟಕಲ್ಲು ಬಿ.ಸಿ ರೋಡು ಲಯನ್ಸ್ ಕ್ಲಬ್ ನ ಅಧ್ಯಕ್ಷ ಎಡ್ವರ್ಡ್ ಮೆನೇಜಸ್ ರವರು ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮೀನ್ ಸಂಸ್ಥೆಯೊಂದಿಗೆ ಸೇರಿ ಈ ಮೊತ್ತವನ್ನು ಸರಸ್ವತಿಯವರಿಗೆ ಹಸ್ತಾಂತರಿಸಿದರು.
ಜಾಸ್ಮೀನ್ ಲಯನ್ಸ್ ನ ಅಧ್ಯಕ್ಷೆ ಮೇಬಲ್ ಮೆನೇಜಸ್, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್, ಅನಿತಾ ಮೆಂಡೋನ್ಸಾ, ವಿಜಯ್ ಧೀರಾಜ್, ಬೆಳ್ಳೆ ಗ್ರಾ.ಪಂ ಸದಸ್ಯೆ ನಥಾಲಿಯಾ ಮಾರ್ಟಿಸ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.