ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಂಟಕಲ್ : ಮಹಿಳೆಯ ಅನಾರೋಗ್ಯದ ಚಿಕಿತ್ಸೆಯ ವೆಚ್ಚಕ್ಕಾಗಿ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನವಿ

Posted On: 31-08-2021 09:50AM

ಕಾಪು : ಸ್ತನದ ಕ್ಯಾನ್ಸರ್ ಹಾಗೂ ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿರುವ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಬಂಟಕಲ್ ನ ಮಹಿಳೆಯು ಯಾವುದೇ ಆದಾಯವಿಲ್ಲದೆ ತನ್ನ ಕುಟುಂಬವನ್ನು ನಡೆಸುತ್ತಿದ್ದಾರೆ.ಇವರಿಗೆ ಎರಡು ಹೆಣ್ಣುಮಕ್ಕಳು. ಒಬ್ಬಳು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಮತ್ತೊಬ್ಬಳು ಡಿಗ್ರಿ ಮಾಡಬೇಕೆನ್ನುವ ಆಸೆ ಹೊತ್ತು ಮನೆಯಲ್ಲಿ ಇದ್ದಾಳೆ. ಈಕೆಯ ಗಂಡ ಅನಾರೋಗ್ಯದಿಂದಾಗಿ ಹಲವು ವರ್ಷದ ಹಿಂದೆ ಸಾವನ್ನಪ್ಪಿದರು. ಅದಾದ ನಂತರ ಈ‌ ಕುಟುಂಬವನ್ನು ಮುನ್ನಡೆಸುವ ಭಾರ ಈ ಮಹಿಳೆಯ ಮೇಲೆ‌ ಇತ್ತು.

ಆದರೆ ಇದೀಗ ಈಕೆಗೂ ಕೂಡ ಅನಾರೋಗ್ಯ ಬಂದ ಕಾರಣದಿಂದ ಈಕೆಯ ಚಿಕಿತ್ಸೆಯ ವೈದ್ಯಕೀಯ ಖರ್ಚನ್ನು ಭರಿಸಲು ಕೂಡ ಈಕೆಗೆ ಸಾಧ್ಯವಾಗುತ್ತಿಲ್ಲ. ಅಷ್ಟು ಮಾತ್ರವಲ್ಲದೆ ಮಳೆಗೆ ಸೋರುವಂತಹ ಮನೆ. ಅಷ್ಟು ಮಾತ್ರವಲ್ಲದೆ ವಿಷಜಂತುಗಳು ಬರಬಹುದೇನೋ ಎನ್ನುವ ರೀತಿಯಲ್ಲಿ ಇರುವ ಮನೆಯ ಬಾಗಿಲು ‌.ಇವೆಲ್ಲವನ್ನು ಕಂಡು ಒಮ್ಮೆ ಯಾರಿಗಾದರೂ ಬೇಸರವಾಗದಿರದು.

ಇವರ ಸದ್ಯದ ಪರಿಸ್ಥಿತಿಗೆ ಸಹಾಯವಾಗುವಂತೆ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇವರಿಗೆ 10,000/- ಚೆಕ್ ನೀಡಿ ಸ್ಪಂದನೆ ನೀಡಲಾಯಿತು. ಆದರೆ ಇವರ ಚಿಕಿತ್ಸೆಗೆ ಹಾಗೂ ಮನೆಯ ರಿಪೇರಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಲಕ್ಷ ಖರ್ಚುಗಳಿವೆ.

ಯಾರಾದರೂ ದಾನಿಗಳು ಇವರ ಸಮಸ್ಯೆಗೆ ನೆರವಾಗುವ ಮನಸ್ಸಿದ್ದಲ್ಲಿ ಈ ಕೆಳಗೆ ನೀಡಿರುವ ಎಕೌಂಟ್ ನಂಬರ್ ಗೆ ಧನ ಸಹಾಯ ಮಾಡಬಹುದು. Ac Num : 920020041710361 IFSC : UTIB0000181 Google pay or phone pay : https://rzp.Io/l/hasthapradhacti ~ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ (ರಿ.) https://www.hasthapradha.org