ರೋಟರಿ ಕಲ್ಯಾಣಪುರ - ಮಹಿಳಾ ಸಮಾನತೆ ದಿನಾಚರಣೆ
Posted On:
01-09-2021 01:13PM
ಉಡುಪಿ : ಮಹಿಳಾ ಸಮಾನತೆ ದಿನವನ್ನು ಆಗಸ್ಟ್ 26 ರಂದು ರೋಟರಿ ಕ್ಲಬ್ ಕಲ್ಯಾಣಪುರದ ವಾರದ ಸಭೆಯಲ್ಲಿ ಆಚರಿಸಲಾಯಿತು. ಕ್ಲಬ್ ನ ನಿಯೋಜಿತ ಅಧ್ಯಕ್ಷೆ ಶಾರ್ಲೆಟ್ ಲೂವಿಸ್ ರವರು ಮಹಿಳಾ ಸಮಾನತೆ, ಹಕ್ಕು ಮತ್ತು ಸಾಮಾಜಿಕ ಮೌಲ್ಯದ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಣದ ಹಕ್ಕು ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಔದ್ಯೋಗಿಕ ರಂಗದಲ್ಲಿ ಮಹಿಳೆಯರ ಸವಾಲುಗಳ ಬಗ್ಗೆ ಮಾತನಾಡಿದರು.
ಈ ಸಂದರ್ಭ ಕ್ಲಬ್ ನ ಅಧ್ಯಕ್ಷ ಶಂಭುಶಂಕರ್, ಕಾರ್ಯದರ್ಶಿ ಪ್ರಕಾಶ್, ನಿಕಟಪೂರ್ವ ಅಧ್ಯಕ್ಷರಾದ ಡೆಸ್ಮಂಡ್ ವಾಸ್, ನಿಕಟಪೂರ್ವ ರೋಟರಿ ಜಿಲ್ಲಾ ಗವರ್ನರ್ ರಾಜಾರಾಂ ಭಟ್ ಮತ್ತು ಸದಸ್ಯರು ಉಪಸ್ಥಿತರಿದ್ದರು.