ಉಡುಪಿ : ವೈಷ್ಣವಿ ಎಂಟರ್ಪ್ರೈಸಸ್ ಮಂಗಳೂರು ಮತ್ತು ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿ ಇವರ ಸಹಯೋಗದಲ್ಲಿ Epson ಮುದ್ರಣ ಯಂತ್ರಗಳ ಪ್ರಾತ್ಯಕ್ಷಿಕೆಯು ಆದಿ ಉಡುಪಿಯ ತಾರಸ್ ಪ್ರಿಂಟ್ ಕಾರ್ನರ್ ಬೈದಶ್ರೀ ಬಿಲ್ಡಿಂಗ್ ನಲ್ಲಿ ಜರಗಿತು. ಬೈದಶ್ರೀ ಅಧ್ಯಕ್ಷರಾದ ದಾಮೋದರ ಕಲ್ಮಾಡಿ ಉದ್ಘಾಟನೆಯನ್ನು ನೆರವೇರಿಸಿದರು.
ಮುಖ್ಯ ಅತಿಥಿಯಾಗಿ Epson ಮಾರ್ಕೆಟಿಂಗ್ ಹೆಡ್ ಶಂಕರ ನಾರಾಯಣನ್, ಮುದ್ರಣಾಲಯ ಮಾಲಕರ ಸಂಘದ ಅಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ಗೌರವ ಸಲಹೆಗಾರರಾದ ಅಶೋಕ್ ಶೆಟ್ಟಿ, ಕೋಶಾಧಿಕಾರಿ ಸುಧೀರ್ ಡಿ, ಬಂಗೇರ, ಸದಸ್ಯರಾದ ರಮೇಶ್ ಕುಂದರ್ ಮತ್ತು ವೈಷ್ಣವಿ ಎಂಟರ್ಪ್ರೈಸಸ್ ನ ಮೋಹನ್ ದಾಸ್ ನಾಯಕ್, ಕಾರ್ತಿಕ್ ಹರೀಶ್, ರಾಜೇಶ್ ಸೀತಾರಾಮ್ ಹಾಗೂ ಚೆಲುವ ರಾಜ್ ಪೆರಂಪಳ್ಳಿ, ಶೇಖರ್ ಪೂಜಾರಿ, ಶ್ರೀಮತಿ ರೂಪ ಉಪಸ್ಥಿತರಿದ್ದರು.