ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿರ್ವ ಗ್ರಾ.ಪಂ ನ SLRM ಘಟಕದ ಪೌರಕಾರ್ಮಿಕರೊಂದಿಗೆ ಹುಟ್ಟು ಹಬ್ಬ ಆಚರಿಸಿದ ಗ್ರಾ.ಪಂ. ಸದಸ್ಯೆ ವೈಲೆಟ್ ಕಸ್ತಲಿನೋ

Posted On: 03-09-2021 11:22AM

ಕಾಪು : ಸಾಮಾನ್ಯವಾಗಿ ಜನರು ತಮ್ಮತಮ್ಮ ಹುಟ್ಟು ಹಬ್ಬವನ್ನು ಕುಟುಂಬ ಸದಸ್ಯರೊಂದಿಗೆ ಅಥವಾ ಹೊಟೇಲುಗಳಲ್ಲಿ ಆಚರಿಸುವುದು ಸಾಮಾನ್ಯ. ಆದರೆ ಶಿರ್ವ ಗ್ರಾಮ ಪಂಚಾಯತ್ ಸದಸ್ಯೆ ವೈಲೆಟ್ ಕಸ್ತಲಿನೋರವರು ತಮ್ಮ ಹುಟ್ಟುಹಬ್ಬವನ್ನು ತಮ್ಮದೇ ಗ್ರಾಮ ಪಂಚಾಯತ್ ನ ಎಸ್.ಎಲ್.ಆರ್.ಎಮ್ ( ಕಸ, ತ್ಯಾಜ್ಯ ಸಂಗ್ರಹ ಮತ್ತು ವಿಂಗಡನಾ ಕೇಂದ್ರ) ಘಟಕದ ಪೌರಕಾರ್ಮಿಕರೊಂದಿಗೆ ಆಚರಿಸಿ ಮಾದರಿ ಎನಿಸಿದ್ದಾರೆ.

ಘಟಕದಲ್ಲಿ ಕೇಕ್ ಕತ್ತರಿಸಿ, ಪೌರಕಾರ್ಮಿಕರಿಗೆ ಕೇಕ್ ತಿನ್ನಿಸಿ ಹುಟ್ಟುಹಬ್ಬ ಆಚರಿಸಿದರು. ನಂತರ ಘಟಕದ ಎಲ್ಲಾ ಪೌರಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನೂ ಮಾಡಿದ್ದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಆರ್. ಪಾಟ್ಕರ್ ರವರು ಮಾತನಾಡಿ ಎಲ್ಲಾ ಗ್ರಾ.ಪಂ ಸದಸ್ಯರು ಇದನ್ನು ಅನುಸರಿಸುವಂತಾಗಲಿ. ಇದರಿಂದ ಘಟಕದ ಪೌರಕಾರ್ಮಿಕರಿಗೆ ಪ್ರೋತ್ಸಾಹ ನಿಡಿದಂತಾಗುತ್ತದೆ ಎಂದರು. ಶಿರ್ವ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಅನಂತಪದ್ಮನಾಭ ನಾಯಕ್, ಶಿರ್ವ ಪೊಲೀಸ್ ಠಾಣಾ ಠಾಣಾಧಿಕಾರಿ ಶ್ರೀಶೈಲಾ ಮುರಗೋಡು ರವರು ಈ ರೀತಿಯ ಹುಟ್ಟುಹಬ್ಬ ಆಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದರು.

ಘಟಕದ ಮೇಲ್ವಿಚಾರಕ ಕಿಶೋರ್ ರವರು ಘಟಕದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಲಯನ್ಸ್ ಕ್ಲಬ್ ಉಡುಪಿ ಕರಾವಳಿಯ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಶಿರ್ವ ಪೋಲಿಸ್ ಠಾಣಾ ಸಿಬ್ಬಂದಿ ಪ್ರಸಾದ್, ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.