ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿರ್ವ: ಸಂತ ಮೇರಿ ಮಹಾವಿದ್ಯಾಲಯದಲ್ಲಿ ಸ್ವಚ್ಛಸರ್ವೇಕ್ಷಣ ಜನಾಂದೋಲನ - 2021

Posted On: 03-09-2021 11:32AM

ಶಿರ್ವ: ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛಸರ್ವೆಕ್ಷಣ ಜನಾಂದೋಲನ 2021 ಕಾರ್ಯಕ್ರಮಕ್ಕೆ ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರ ವ್ಯಾಪಿ ಚಾಲನೆ ನೀಡಿದೆ.

ಇದರ ಪ್ರಯುಕ್ತ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಎನ್.ಸಿ.ಸಿ, ಎನ್.ಎಸ್.ಎಸ್, ಹಾಗು ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಚ್ಚತೆ ಮತ್ತು ಅದನ್ನು ಸಮರ್ಪಕವಾಗಿ ತಮ್ಮ ಸುತ್ತಲ ಮನೆ, ಪರಿಸರಗಳಿಗೆ ಅನ್ವಯವಾಗುವಂತೆ ಕಾರ್ಯರೂಪಗೊಳಿಸುವಲ್ಲಿ ಸ್ವಚ್ಚತಾ ಸರ್ವೇಕ್ಷಣ ಪ್ರತಿಜ್ಞಾ ವಿಧಾನವನ್ನು ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ನೆರವೇರಿಸಿಕೊಟ್ಟರು.

ಎನ್.ಸಿ.ಸಿ ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ್ ಸತೀಶ್, ಕ್ಯಾಡೆಟ್ ಜೂನಿಯರ್ ಆಫೀಸರ್ ಪ್ರವಿತ ಆಚಾರ್ಯ, ರಿಯಾನ್ ರಿಷಿ ಆಲ್ಫೋನ್ಸೋ, ಕಂಪನಿ ಸಾರ್ಜೆಂಟ್ ಮೇಜರ್ ಪ್ರತಿಮ, ಕ್ವಾರ್ಟರ್ ಮಾಸ್ಟರ್ ರೈನ್ ಅಂದ್ರಾದೆ, ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿ ನಾಯಕರಾದ ಅಕ್ಷಯ್, ಸುರೇಖಾ, ವೈಷ್ಣವಿ, ಅಪೇಕ್ಷಾ,ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿ ನಾಯಕರಾದ ಫ್ರಾಂಕ್ಲಿನ್ ಮತಾಯಸ್ ಮತ್ತು ಪ್ರತೀಕ್ಷಾ ಉಪಸ್ಥಿತರಿದ್ದರು.