ಲಯನ್ಸ್ ಕ್ಲಬ್ ಉಡುಪಿ ಕರಾವಳಿಯಿಂದ ಪತ್ರಿಕಾ ವಿತರಕರ ದಿನಾಚರಣೆ
Posted On:
04-09-2021 11:11PM
ಉಡುಪಿ : ಲಯನ್ಸ್ ಕ್ಲಬ್ ಉಡುಪಿ ಕರಾವಳಿ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆಯನ್ನು ಆಚರಿಸಲಾಯಿತು. ಬಂಟಕಲ್ಲು ಪರಿಸರದಲ್ಲಿ ಸುಮಾರು 20 ವರ್ಷಗಳಿಂದ ಪತ್ರಿಕೆ ವಿತರಕರಾಗಿರುವ ಕೆ. ಆರ್. ಪಾಟ್ಕರ್ ರವರನ್ನು ಅವರ ಮನೆಯಲ್ಲಿ ಲಯನ್ಸ್ ಉಡುಪಿ ಕರಾವಳಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭ ರಮಾನಂದ ಶೆಟ್ಟಿಗಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕಾ ದಿನಾಚರಣೆಯ ಮಹತ್ವ ಬಗ್ಗೆ ತಿಳಿಸಿ ಕೆ.ಆರ್. ಪಾಟ್ಕರ್ ರವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ. ಆರ್. ಪಾಟ್ಕರ್ ರವರು ಸನ್ಮಾನಕ್ಕೆ ಕೃತಜ್ಞತೆ ತಿಳಿಸಿ ಪತ್ರಿಕಾ ವಿತರಣೆ ವೃತ್ತಿಯನ್ನು ತಾನು ಗೌರವಿಸಿ, ಈ ವೃತ್ತಿಯನ್ನು ತುಂಬಾ ಪ್ರೀತಿಸುವುದು ಮಾತ್ರವಲ್ಲದೆ ಈ ಬಗ್ಗೆ ಹೆಮ್ಮೆ ಪಡುವುದಾಗಿ ತಿಳಿಸಿದರು. ತನಗಿಂದು ದೊರೆತಿರುವ ಸ್ಥಾನ ಮಾನಗಳಿಗೆ ಈ ವೃತ್ತಿಯೇ ಕಾರಣ ಎಂದರು.
ನಿಕಟಪೂರ್ವ ಅಧ್ಯಕ್ಷ ಅನಂತರಾಮ ವಾಗ್ಲೆ, ರತ್ನಾಕರ ಕಾಮತ್, ಗ್ರಾ.ಪಂ ಸದಸ್ಯೆ ವೈಲೇಟ್ ಕಸ್ತಲಿನೋ, ಅನಿತಾ ಮೆಂಡೋನ್ಸಾ, ಸಂಗೀತಾ ಪಾಟ್ಕರ್, ರಚಿತಾ ಪಾಟ್ಕರ್ ಉಪಸ್ಥಿತರಿದ್ದರು.
ಅಧ್ಯಕ್ಷ ರವೀಂದ್ರ ಆಚಾರ್ಯರವರು ಸ್ವಾಗತಿಸಿ,
ಕಾರ್ಯದರ್ಶಿ ರಾಘವೇಂದ್ರ ನಾಯಕ್ ವಂದಿಸಿದರು.