ಕೊರಗಜ್ಜ ದೈವವನ್ನು ಅವಹೇಳನಗೈಯುತ್ತಿರುವ ವಾಟ್ಸಾಪ್ ಗ್ರೂಪ್ - ಸಾರ್ವಜನಿಕರ ಆಕ್ರೋಶ
Posted On:
05-09-2021 05:00PM
ಕಾಪು : ಸಾಮಾಜಿಕ ಜಾಲತಾಣಗಳ ಮೂಲಕ ದೈವ, ದೇವರ ನಿಂದನೆಯಾಗುತ್ತಿರುವುದು ತದನಂತರ ಒಂದಷ್ಟು ವಿರೋಧದ ಬಳಿಕ ಕ್ಷಮೆಯಾಚನೆಯ ಘಟನೆಗಳು ನಮ್ಮ ಸುತ್ತ ನಡೆಯುತ್ತಿರುವುದು ನಮ್ಮೆಲ್ಲರಿಗೂ ಗೊತ್ತು.
ಇದೀಗ ಅಂತಹುದೇ ಘಟನೆ ಮತ್ತೊಮ್ಮೆ ನಡೆದಿದೆ.
ವಾಟ್ಸಾಪ್ ಮೂಲಕ ಕೊರಗಜ್ಜ ದೈವವನ್ನು ಅವಹೇಳನ ಮಾಡುವ ಗುಂಪೊಂದನ್ನು ರಚಿಸಿ ಅದರ ಮೂಲಕ ತುಲುವರ ಧಾರ್ಮಿಕ ಭಾವನೆಯನ್ನು ಕೆರಳಿಸುವ ಷಡ್ಯಂತರ ಈ ಗುಂಪಿನಲ್ಲಿ ನಡೆಯುತ್ತಿದೆ.
ಈ ವಾಟ್ಸಾಪ್ ಗುಂಪಿನ ಸ್ಕ್ರೀನ್ ಶಾಟ್ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.