ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಕೃಷ್ಣ, ರಾಧೆ- ಕೃಷ್ಣ, ಮತ್ತು ಯಶೋಧ-ಕೃಷ್ಣ ಸ್ಪರ್ಧಾ ಕಾರ್ಯಕ್ರಮ
Posted On:
09-09-2021 10:51AM
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ , ಇನ್ನರ್ ವೀಲ್ ಕ್ಲಬ್ ಹಾಗು ರೋಟರಿ ಸಮುದಾಯದಳ ಇದರ ಜಂಟಿ ಸಹಯೋಗದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಕೃಷ್ಣ, ರಾಧೆ- ಕೃಷ್ಣ, ಮತ್ತು ಯಶೋಧ- ಕೃಷ್ಣ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಧೂತೆ ಗುಳಿಗೆ ನಾಟಕದಲ್ಲಿ ಗುಳಿಗನ ಪಾತ್ರ ನಿರ್ವಹಿಸಿದ ಕನ್ನಡ ಕಿರುತರೆ ಹಾಗು ಚಲನಚಿತ್ರ ನಟ ಸ್ವರಾಜ್ ಶೆಟ್ಟಿ ಹಾಗು ಚಲನಚಿತ್ರ ನಟಿ ನವ್ಯ ಪೂಜಾರಿರವರನ್ನು ಸಾನ್ಮನಿಸಲಾಯಿತು.
ಒಟ್ಟು 80 ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ರೋಟರಿ ವಲಯ. ನಿಕಟ ಪೂರ್ವ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರ್ ಪುರ , ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅಡ್ವೆ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ ದೀಪಕ್ ಕೋಟ್ಯಾನ್ ಇನ್ನಾ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಕೇಸರಿ ಯುವರಾಜ್, ರೋಟರಿ ವಲಯ ಸಂಯೋಜಕ ರಮೀಜ್ ಹುಸೇನ್ ಪಡುಬಿದ್ರಿ ಗ್ರಾ.ಪಂ ಸದಸ್ಯರಾದ ಜ್ಯೋತಿ ಮೆನನ್ , ಶಶಿಕಲಾ, ಸುನಂದಾ ಸಾಲ್ಯಾನ್ ಕಾರ್ಯಕ್ರಮ ನಿರ್ದೇಶಕರಾದ ಗೀತಾ ಅರುಣ್, ಸ್ನೇಹ ಪ್ರವೀಣ್, ಸುಶ್ಮಿತಾ ಪಾದೆಬೆಟ್ಟು ಉಪಸ್ಥಿತರಿದ್ದರು.
ಮುದ್ದು ಕೃಷ್ಣ ಸ್ಪರ್ಧೆ ಯ ವಿಜೇತರು
ವಿಭಾಗದಲ್ಲಿ ನಡೆದ ಸ್ಪರ್ಧೆ ಯಲ್ಲಿ ಮೂರು ವರ್ಷ ಕೆಳಗಿನವರ ವಿಭಾಗ, ( 0-3 )
ಪ್ರಥಮ ಪೂರ್ವಿ, ದ್ವಿತೀಯ ಸಮರ್ಥ
ಮೂರರಿಂದ ಅರು ವರ್ಷ ದೊಳಗಿನ ವಿಭಾಗ ( 3- 6 )
ಪ್ರಥಮ-ಎಚ್. ಪ್ರರ್ಣಿಕಾ ಆಚಾರ್ಯ, ದ್ವಿತೀಯ-
ಸಮನ್ವಿ ಎಸ್ ಕರ್ಕೇರ.
ಆರು ವರ್ಷದಿಂದ ಹತ್ತು ವಿಭಾಗ ( 6- 10 )
ಪ್ರಥಮ-ಅನಿಕಾ ಭರತ್ ರಾಜ್, ದ್ವಿತೀಯ -ಪ್ರತೀಕ್ಷಾ
ರಾಧೆ -ಕೃಷ್ಣ ಸ್ಪರ್ಧೆಯ ಮೂರು ವರ್ಷ ದಿಂದ ಅರು ವರ್ಷ ದೂಳಗಿನ ವಿಜೇತರು ( 3-6 )
ಪ್ರಥಮ - ವರ್ಷ ಮತ್ತು ಆರಾಧ್ಯ, ದ್ವಿತೀಯ- ಸ್ವರ ಮತ್ತು ಅವರ್ಥ್
ಆರು ವರ್ಷದಿಂದ ಹತ್ತು ವರ್ಷದೊಳಗಿನ ರಾಧೆ -ಕೃಷ್ಣ ಸ್ಪರ್ಧೆಯ ವಿಜೇತರು (6-10 )
ಪ್ರಥಮ- ಅನಿಕಾ ಮತ್ತು ಎಚ್. ಪ್ರರ್ಣಿಕಾ ಅಚಾರ್ಯ, ದ್ವಿತೀಯ -ಸುರಕ್ಷಿತಾ ಮತ್ತು ವೈಷ್ಣವಿ
ಯಶೋಧ ಕೃಷ್ಣ ಸ್ಪರ್ಧೆಯ ವಿಜೇತರು
ಪ್ರಥಮ-ದಿವ್ಯ ಮತ್ತು ಪ್ರಣಮ್ಯ, ದ್ವಿತೀಯ -ಸೌಂದರ್ಯ
ತೀರ್ಪುಗಾರರಾಗಿ ಚಿತ್ರನಟ ಸ್ವರಾಜ್ ಶೆಟ್ಟಿ, ಚಿತ್ರನಟಿ ನವ್ಯ ಪೂಜಾರಿ, ಭರತನಾಟ್ಯ ಕಲಾವಿದೆ ಮಂಗಳ ಕಿಶೋರ್ ಸಹಕರಿಸಿದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕೋರ್ಡಿನೇಟರ್ ನವೀನ್ ಚಂದ್ರ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ವೈ.ಸುಕುಮಾರ್ , ಕಟಪಾಡಿ ರೋಟರಿ ಸದಸ್ಯ ಸಂತೋಷ್ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ.ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಎರ್ಮಾಳು ಗ್ರಾ.ಪಂ. ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಇನ್ನರ್ ವೀಲ್ ಅಧ್ಯಕ್ಷೆ ಅನಿತಾ ಬಿ.ವಿ ,ಕಾರ್ಯದರ್ಶಿ ಶುಭ ದಿನೇಶ್, ರೋಟರಿ ಸಮುದಾಯದಳ ಅಧ್ಯಕ್ಷೆ ಲಾವಣ್ಯ , ಕಾರ್ಯದರ್ಶಿ ಅದ್ವತ್ ಕುಮಾರ್ ಉಪಸ್ಥಿತರಿದ್ದರು.
ರೋಟರಿ ಅಧ್ಯಕ್ಷ ಮಹಮ್ಮದ್ ನಿಯಾಜ್ ಸ್ವಾಗತಿಸಿ, ಕಾರ್ಯದರ್ಶಿ ಬಿ.ಯಸ್ ಆಚಾರ್ಯ ವಂದಿಸಿ, ಸುಧಾಕರ್ ಕೆ , ಹಾಗು ಕಾರ್ತಿಕ್ ಮುಲ್ಕಿ, ಕಾರ್ಯಕ್ರಮ ನಿರೂಪಿಸಿದರು.