ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಯುವವಾಹಿನಿ ಘಟಕದ ಪದಗ್ರಹಣ

Posted On: 09-09-2021 12:52PM

ಪಡುಬಿದ್ರಿ : ನಮಗಿಂತ ದುರ್ಬಲರನ್ನು ಅಣಕಿಸುವುದಕ್ಕಿಂತ ಅವರನ್ನು ನಮ್ಮೊಂದಿಗೆ ಜೊತೆಯಾಗಿಸುವ ಪ್ರಯತ್ನ ಮಾಡಬೇಕಾಗಿದೆ. ಸ್ವಾಭಿಮಾನದ ಬದುಕಿಗೆ ಮೌಲ್ಯಾಧಾರಿತ ಶಿಕ್ಷಣವು ಭೂಷಣ. ಅದ್ಧೂರಿತನ, ಜನ ಸೇರಿಸುವಿಕೆಯ ಅವಶ್ಯಕತೆಗಿಂತ ಕಾರ್ಯಕ್ರಮದ ಅರಿವು ಜನರಲ್ಲಿ ಮೂಡಿಸಬೇಕಾಗಿದೆ ಎಂದು ಯುವವಾಹಿನಿ (ರಿ.)ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಡಾ|ರಾಜಾರಾಮ್ ಕೆ.ಬಿ. ಹೇಳಿದರು. ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರುಗಿದ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಭವಿಷ್ಯದ ,ರೂವಾರಿ ನಾವೇ, ಯಾವುದೇ ಕರ್ತವ್ಯವನ್ನು ಕೀಳಾಗಿ ಕಾಣದೆ, ಆರೋಗ್ಯಕ್ಕೆ ಮಹತ್ವ ನೀಡಿ ಜಾಗೃತರಾಗೋಣ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಘಟಕದ‌ ಮುಂದಿನ ಕಾರ್ಯಯೋಜನೆಗಳಿಗೆ ಶುಭ ಹಾರೈಸಿದರು.

ಸನ್ಮಾನ : ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಘಟಕದ ಸುದೀಪ್ ಎಸ್. ಕೋಟ್ಯಾನ್, ಸ್ವಾತಿ, ಕ್ಷಮ್ಯ ಅಮೀನ್ ರನ್ನು ಸನ್ಮಾನಿಸಲಾಯಿತು. ಪದ ಪ್ರದಾನ, ಅಧಿಕಾರ ಹಸ್ತಾಂತರ : ಯುವವಾಹಿನಿ( ರಿ.)ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾದ ಡಾ|ರಾಜಾರಾಮ್ ಕೆ.ಬಿ. ಪಡುಬಿದ್ರಿ ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿದರು. ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ನೂತನ ಅಧ್ಯಕ್ಷರಾದ ಯಶೋದರಿಗೆ ಹಾಗೂ ಕಾರ್ಯದರ್ಶಿ ಶಾಶ್ವತ್ ಎಸ್. ಪೂಜಾರಿ ನೂತನ ಕಾರ್ಯದರ್ಶಿ ವಿಧಿತ್ ರವರಿಗೆ ಅಧಿಕಾರ ಹಸ್ತಾಂತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ.ಕೋಟ್ಯಾನ್ ವಹಿಸಿದ್ದರು. ಈ ಸಂದರ್ಭ ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಯೋಗೀಶ್ ಪೂಜಾರಿ ಮಾದುಮನೆ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಜಯರಾಮ್ ಕಾರಂದೂರು, ಪಡುಬಿದ್ರಿ ಬಿಲ್ಲವ ಸಂಘದ ಕೋಶಾಧಿಕಾರಿ ಅಶೋಕ್ ಪೂಜಾರಿ ಪಾದೆಬೆಟ್ಟು ಉಪಸ್ಥಿತರಿದ್ದರು. ಸುಜಾತ ಹರೀಶ್, ಡಾ| ಐಶ್ವರ್ಯ ಸಿ. ಅಂಚನ್ ಪ್ರಾರ್ಥಿಸಿ, ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ.ಕೋಟ್ಯಾನ್ ಸ್ವಾಗತಿಸಿ, ಶಾಶ್ವತ್ ಎಸ್. ಪೂಜಾರಿ ವರದಿ ವಾಚಿಸಿ, ಯೋಗೀಶ್ ಪೂಜಾರಿ ಮಾದುಮನೆ ನೂತನ ಪದಾಧಿಕಾರಿಗಳ ಪಟ್ಟಿ ವಾಚಿಸಿ, ನಿಶ್ಮಿತ ಪಿ. ಆರ್, ಸುಜಾತ ಪ್ರಸಾದ್, ಶಯನ ಕಾರ್ಯಕ್ರಮ ನಿರ್ವಹಿಸಿ, ನೂತನ ಕಾರ್ಯದರ್ಶಿ ವಿಧಿತ್ ವಂದಿಸಿದರು.