ಎಳತ್ತೂರು : ಕಾಲಗರ್ಭದಲ್ಲಿ ಕಳೆದುಹೋಗಿರುವ ದೈವಗಳ ಸೊತ್ತುಗಳು ಪತ್ತೆ!
Posted On:
09-09-2021 03:18PM
ಮೂಲ್ಕಿ : ಮೂಲ್ಕಿ ಒಂಬತ್ತು ಮಾಗಣೆಯ ಎಳತ್ತೂರು ಗ್ರಾಮದಲ್ಲಿ ಕಾಲಗರ್ಭದಲ್ಲಿ ಮರೆಮಾಚಿರುವ ಎಳತ್ತೂರು ಕಾಪೇಡಿ ಗುತ್ತುವಿನ ಕುಟುಂಬವು ಹಲವಾರು ವಿಭಾಗಗಳಾಗಿ, ತದನಂತರ ಒಬ್ಬರಿಗೊಬ್ಬರಿಗೆ ಪರಿಚಯವಾಗಿ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಯನ್ನು ಇಡಲಾಗಿತ್ತು.
ಅದರಲ್ಲಿ ಗೋಚರವಾದಂತೆ ಪ್ರಧಾನವಾಗಿ ಉಳ್ಳಾಯ, ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳು ಇರುವುದು ಕಂಡುಬದಿತ್ತು. ಅಲ್ಲದೆ ಕಾಂತೇರಿ ಜುಮಾದಿ ದೈವಕ್ಕೆ ಮೈಲೆಡ್ ಮಾನೆಚ್ಚಿಲ್ ಸೇವೆಯನ್ನು ನೀಡಲಾಗಿತ್ತು. ದೈವದ ನುಡಿ ಬಂದಂತೆ ಪುರಾತನದ ಗುತ್ತಿನ ಮನೆ ಇದ್ದ ಸ್ಥಳದಲ್ಲಿ ದೈವಕ್ಕೆ ಸಂಬಂದಿಸಿದ ಸೊತ್ತುಗಳು ಸಿಗುವುದೆಂದು ನುಡಿಯಾಗಿತ್ತು.ಅಂತೆಯೇ ಹುಡುಕಲು ಪ್ರಾರಂಭಿಸಿದ ದೈವಗಳ ಅವಶೇಷ ಇರುವುದು ಪತ್ತೆಯಾಗಿತ್ತು.
ಎಳತ್ತೂರು ಕಾಪೇಡಿ ಗುತ್ತು ಕಾಂತೇರಿ ಜುಮಾದಿ ದೈವವು ತನ್ನ ಕಾರ್ಣಿಕವನ್ನು ತೋರಿಸಿ ಕುಟುಂಬದವರನ್ನು ಮತ್ತು ಇಡೀ ತುಳುನಾಡಿನ ಜನರಲ್ಲಿ ಅಚ್ಚರಿ ಮೂಡಿಸಿದೆ.
ಅಂತೆಯೇ ದೈವದ ಪ್ರೇರಣೆಯಂತೆ, ಕುಟುಂಬಸ್ಥರ ಸಂಕಲ್ಪದಂತೆ ಸೆಪ್ಟೆಂಬರ್ 11 ಕ್ಕೆ ಕಾಪೇಡಿ ಗುತ್ತು ಧರ್ಮ ಚಾವಡಿಯ ನೂತನ ಮನೆಗೆ ಶಿಲಾನ್ಯಾಸ ಮಾಡುವುದಾಗಿ ನಿಶ್ಚಯಿಸಲಾಗಿದೆ.