ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪುವಿನ ಹೂವಿನ ಅಂಗಡಿಯ ಹಿಂಗಾರದಲ್ಲಿ ಪ್ರಕೃತಿದತ್ತವಾಗಿ ಮೂಡಿದ ಗಣೇಶ

Posted On: 09-09-2021 11:55PM

ಕಾಪು : ಚೌತಿ ಹಬ್ಬಕ್ಕೂ ಸ್ವಲ್ಪ ದಿನ ಮುಂಚಿತವಾಗಿಯೇ ಅನೇಕ ಕಲಾವಿದರು ತಮ್ಮ ಕೈಚಳಕದಿಂದ ಗಣೇಶನ ಮೂರ್ತಿ ತಯಾರಿಸುವುದು ರೂಢಿಯಾಗಿದೆ, ಬೇಳೆ ಕಾಳು, ದವಸ ಧಾನ್ಯಗಳಲ್ಲಿ ಹಾಗೂ ತರಕಾರಿ, ಹಣ್ಣು ಹಂಪಲು ಸೇರಿದಂತೆ ಇತರೇ ಫಲವಸ್ತುಗಳಲ್ಲಿಯೂ ಗಣೇಶನ ಆಕೃತಿಗೆ ರೂಪು ಕೊಡುವ ಕೆಲಸವನ್ನು ಮಾಡುತ್ತಾರೆ. ಆದರೆ ಕಾಪುವಿನ ಶ್ರೀ ಲಕ್ಷ್ಮೀ ಜನಾರ್ದನ ಫ್ಲವರ್ ಸ್ಟಾಲ್ ನಲ್ಲಿ ಹಿಂಗಾರದಲ್ಲಿ ಪ್ರಕೃತಿದತ್ತವಾಗಿಯೇ ಗಣೇಶನ ಮೂರ್ತಿ ಮೂಡಿ ಬಂದಿದೆ.

ಕಾಪುವಿನ ಕಲ್ಯಾಲು ನಿವಾಸಿ ರಾಜ್ ಸಾಲ್ಯಾನ್ ಗಣೇಶ ಹಬ್ಬದ ಪ್ರಯುಕ್ತ ಹೂ ಖರೀದಿಸಲು ಕಾಪುವಿನ ತೃಪ್ತಿ ಹೋಟೆಲ್ ಮುಂಭಾಗದಲ್ಲಿರುವ ಶ್ರೀ ಲಕ್ಷ್ಮೀ ಜನಾರ್ದನ ಪ್ಲವರ್ ಸ್ಟಾಲ್ಗೆ ಬಂದಾಗ ಹಿಂಗಾರದಲ್ಲಿ ಗಣೇಶ ಪ್ರತ್ಯಕ್ಷವಾಗಿದ್ದ.

ಈ ಬಗ್ಗೆ ಮಾತನಾಡಿದ ಫ್ಲವರ್ ಸ್ಟಾಲ್ ಮಾಲಕ ಪ್ರಕಾಶ್ ಗಾಣಿಗ ಇವರು, ಕಳೆದ 35 ವರ್ಷಗಳಿಂದ ಹೂವಿನ ವ್ಯಾಪಾರ ಮಾಡುವ ನನಗೆ ಇದೆ ಮೊದಲ ಬಾರಿಗೆ ಹಿಂಗಾರದಲ್ಲಿ ಗಣೇಶ ಕಾಣಿಸಿಕೊಂಡದ್ದು, ಬಹಳ ಸಂತೋಷವಾಗಿದೆ ಎಂದರು, ಆ ಹಿಂಗಾರವನ್ನು ಯಾರಿಗೂ ಕೊಡದೆ ಸ್ಟಾಲ್ ನಲ್ಲಿಯೇ ಇಟ್ಟುಕೊಂಡಿದ್ದಾರೆ.

ಸುದ್ದಿ ತಿಳಿದಾಗ ಒಂದಷ್ಟು ಜನ ಇಲ್ಲಿಗೆ ಆಗಮಿಸಿ ಹಿಂಗಾರದ ಗಣೇಶನ ದರ್ಶನ ಪಡೆದರು.