ಅದಮಾರು : ಪ್ರಾಂಶುಪಾಲ ಎ.ಎಸ್. ಭಟ್ ನೆನಪಿನಲ್ಲಿ ಗಿಡ ವಿತರಣೆ
Posted On:
10-09-2021 04:52PM
ಕಾಪು, ಸೆ.10 : ಇಲ್ಲಿಯ ಆದರ್ಶ ಸಂಘಗಳ ಒಕ್ಕೂಟವು ಆದರ್ಶ ಯುವಕ ಸಂಘದ ಸ್ಥಾಪಕ, ನಿವೃತ್ತ ಪ್ರಾಂಶುಪಾಲ ,ಶಿಕ್ಷಣ - ಶಿಷ್ಯ ಪ್ರೀತಿಯ ಕೀರ್ತಿಶೇಷ ಎ.ಎಸ್ .ಭಟ್ ಅವರ 101 ನೇ ಜನ್ಮದಿನಾಚರಣೆಯ ಪ್ರಯುಕ್ತ 101 ಸಂಖ್ಯೆಯ ವಿವಿಧ ಹೂ,ಹಣ್ಣು,ಕಂಗು ,ತೆಂಗು,ಬಾಳೆ ಗಿಡಗಳನ್ನು ವಿತರಿಸಲಾಯಿತು.
ಎ.ಎಸ್.ಭಟ್ ಅವರು ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ,ಪ್ರಾಂಶುಪಾಲರಾಗಿ, ಶಿಕ್ಷಣದೊಂದಿಗೆ ,
ಶಿಸ್ತಿನ ಮಹತ್ವವನ್ನು ಬೋಧಿಸಿದ ಆದರ್ಶ ಶಿಕ್ಷಕ. ತೋಟಗಾರಿಕಾ ಅಭಿಯಾನವನ್ನು ಅಭೂತಪೂರ್ವವಾಗಿ ಸಾಧಿಸಿದ್ದರು ಎಂದು ನೆನಪಿಸಿಕೊಳ್ಳುತ್ತಾ ಗಿಡಗಳನ್ನು ವಿತರಿಸಲಾಯಿತು.
ಎರಡು ಸಂಪಿಗೆಯ ಗಿಡಗಳನ್ನು ಹಾಗೂ ಎರಡು ತೆಂಗಿನ ಸಸಿಗಳನ್ನು ಯುವಕ ಸಂಘ ಹಾಗೂ ಸಮುದಾಯ ಭವನದ ವಠಾರದಲ್ಲಿ ನೆಡಲಾಯಿತು.
ಆದರ್ಶ ಸಂಘಗಳ ಒಕ್ಕೂಟದ ಅಧ್ಯಕ್ಷ ಎರ್ಮಾಳು ಉದಯ ಕೆ .ಶೆಟ್ಟಿ, ಪೋಷಕ ನಾರಾಯಣ ಕೆ.ಶೆಟ್ಟಿ ನೈಮಾಡಿ , ಸಮುದಾಯ ಭವನದ ಅಧ್ಯಕ್ಷ ಕೆ.ಎಲ್ ಕುಂಡಂತಾಯ, ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸುದರ್ಶನ ವೈ .ಎಸ್. ಯುವಕ ಸಂಘದ ಅಧ್ಯಕ್ಷ ಸಂತೋಷ ಜೆ.ಶೆಟ್ಟಿ , ಕಾರ್ಯದರ್ಶಿ ಗಣೇಶ ಸಾಲಿಯಾನ್,
ಅದರ್ಶ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ
ಲತಾ ಆರ್. ಆಚಾರ್ಯ, ಯುವಕ ಸಂಘ ಹಾಗೂ ಮಹಿಳಾ ಮಂಡಲಗಳ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅದಮಾರಿನ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಪುಸ್ತಕಗಳನ್ನು ನಾರಾಯಣ ಕೆ.ಶೆಟ್ಟಿ ನೈಮಾಡಿ ಅವರ ವತಿಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ದೇವಿಕಾ ಹಾಗೂ ಶಿಕ್ಷಕಿ ಶ್ರೀಮತಿ ಸುಜಾತಾ ಅವರಿಗೆ ಹಸ್ತಾಂತರಿಸಲಾಯಿತು. ಶಾಲೆಯ ಅಧ್ಯಕ್ಷರಾದ ಎ. ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಯುವಕ ಸಂಘದ ಆರನೇ ವರ್ಷದ ಗಣೇಶೋತ್ಸವ ನಡೆಯಿತು .