ಶ್ರೀ ವಿಷ್ಣು ಫ್ರೆಂಡ್ಸ್ ಮಡುಂಬು ಅಜಿಲಕಾಡು ಇವರ ವತಿಯಿಂದ ಮಡುಂಬು ಜಂಕ್ಷನ್ ನಲ್ಲಿ ಕಾಪು - ಶಂಕರಪುರ - ಬಂಟಕಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ತಿರುವಿನಲ್ಲಿ ಸುಗಮ ಸಂಚಾರಕ್ಕೆ ಪೀನ ದರ್ಪಣ ಅಳವಡಿಕೆ ಮಾಡಿ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾ. ಪಂ. ಅಧ್ಯಕ್ಷರಾದ ಮಲ್ಲಿಕಾ ಆಚಾರ್ಯ, ಸದಸ್ಯರುಗಳಾದ ದಿವೇಶ್ ಶೆಟ್ಟಿ ಕಲ್ಯಾಲು, ನಿತೇಶ್ ಸಾಲ್ಯಾನ್ ಕಲ್ಯಾಲು, ಸವಿತಾ ಸುರೇಶ್ ಶೆಟ್ಟಿ, ಸ್ಥಳೀಯರಾದ ಡಾ. ಗಣೇಶ್ ಶೆಟ್ಟಿ, ವಿಜಯ್.ಜಿ. ಉಂಡಾರು, ನಿರಂಜನ್ ಶೆಟ್ಟಿ ಮಡುಂಬು, ದೀಕ್ಷಾ ತಂತ್ರಿ ಮಡುಂಬು ಹಾಗೂ ಶ್ರೀ ವಿಷ್ಣು ಫ್ರೆಂಡ್ಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ವಿಷ್ಣು ಫ್ರೆಂಡ್ಸ್ ನ ಅಧ್ಯಕ್ಷರಾದ ಸುಧಾಕರ್ ಪೂಜಾರಿ ಶಾಂತಿಕೆರೆ ಅತಿಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು, ಮನೋಹರ್ ಕಲ್ಲುಗುಡ್ಡೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು.