ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಗಣೇಶ ಚತುರ್ಥಿ ಆಚರಣೆ
Posted On:
11-09-2021 10:11AM
ಪಡುಬಿದ್ರಿ : ಧರ್ಮ ಮೀರಿ ಸೌಹಾರ್ದದತೆಯಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಅಂತಹ ಕಾರ್ಯವನ್ನು ಪಡುಬಿದ್ರಿ ರೋಟರಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಮಾನವೀಯತೆ ಹಾಗೂ ಮನುಷ್ಯತ್ವದ ಸೇವೆಯಲ್ಲಿ ಭಗವಂತನನ್ನು ಕಾಣಬಹುದು. ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಮಾಡಿದ ಕಾರ್ಯ ನಿರ್ವಿಘ್ನ ವಾಗಿ ನಡೆಯುವುದು ಎಂದು ರಾಜ ಪುರೋಹಿತರಾದ ನಂದ ಕುಮಾರ್ ರವರು ಹೇಳಿದರು.
ಅವರು ಪಡುಬಿದ್ರಿ ರೋಟರಿ ಕ್ಲಬ್ ಇದರ ವತಿಯಿಂದ ರೋಟರಿ ಕಛೇರಿಯಲ್ಲಿ ನಡೆದ ಗಣೇಶ ಚತುರ್ಥಿ ಆಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪಡುಬಿದ್ರಿ ರೋಟರಿ ಅಧ್ಯಕ್ಷ ಮಹಮ್ಮದ್ ನಿಯಾಜ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ರೋಟರಿ ವಲಯ ಸಂಯೋಜಕ ರಮೀಜ್ ಹುಸೇನ್ , ರೋಟರಿ ಪೂರ್ವ ಅಧ್ಯಕ್ಷ ರಿಯಾಜ್ ಮುದರಂಗಡಿ, ನಿಯೋಜಿತ ಅಧ್ಯಕ್ಷತೆ ಗೀತಾ ಅರುಣ್, ನಿಯೋಜಿತ ಕಾರ್ಯದರ್ಶಿ ತಸ್ನೀನ್ ಅರ್ಹ ಉಪಾಧ್ಯಕ್ಷ ಸಂತೋಷ್ ಪಡುಬಿದ್ರಿ, ಕೋಶಾಧಿಕಾರಿ ಪುಷ್ಪಲತಾ ಆಚಾರ್ಯ ಉಪಸ್ಥಿತರಿದ್ದರು.
ಮಹಮ್ಮದ್ ನಿಯಾಜ್ ಸ್ವಾಗತಿಸಿ, ಸುಧಾಕರ್ ಕೆ. ನಿರೂಪಿಸಿ, ಕಾರ್ಯದರ್ಶಿ ಬಿ. ಯಸ್. ಆಚಾರ್ಯ ವಂದಿಸಿದರು.