ಕಾಪು : ಇನ್ನಂಜೆ ಯುವಕ ಮಂಡಲದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಇನ್ನಂಜೆಯ ದಾಸ ಭವನದಲ್ಲಿ ಆದಿತ್ಯವಾರ (ಸೆಪ್ಟೆಂಬರ್ 12) ಬೆಳಿಗ್ಗೆ 10:30ಕ್ಕೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ನಿಟ್ಟೆ ಎಜುಕೇಶನ್ ಟ್ರಸ್ಟ್ ನಿವೃತ್ತ ಉಪಪ್ರಾಂಶುಪಾಲರಾದ ಡಾ| ರಮೇಶ್ ಮಿತ್ತಂತ್ತಾಯ, ಇನ್ನಂಜೆ ಎಸ್.ವಿ.ಹೆಚ್, ಪ.ಪೂ. ಕಾಲೇಜು ನಿವೃತ್ತ ಉಪನ್ಯಾಸಕರಾದ ನಂದನ್ ಕುಮಾರ್, ಇನ್ನಂಜೆ ಯುವಕ ಮಂಡಲದ ಗೌರವ ಸಲಹೆಗಾರಾದ ಚಂದ್ರಹಾಸ ಗುರುಸ್ವಾಮಿ, ನವೀನ್ ಅಮೀನ್, ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವಿವರ್ಮ ಶೆಟ್ಟಿ, ಇನ್ನಂಜೆ ಯುವಕ ಮಂಡಲದ ಸಲಹಾ ಸಮಿತಿ ಸದಸ್ಯರಾದ ಶ್ರೀಶ ಭಟ್, ಸುರೇಶ್ ಎನ್. ಪೂಜಾರಿ ಭಾಗವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.