ಉಡುಪಿ : ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಾವ ಚಿತ್ರದೊಂದಿಗೆ ಪತ್ರಿಕೆಯೊಂದರ ಸಂಪಾದಕ ಅಸಂವಿಧಾನಾತ್ಮಕ ಪದ ಬಳಸಿ ಫೇಸ್‍ಬುಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಸಂಖ್ಯಾತ ಬಿಲ್ಲವ ಸಮಾಜದ ಗುರುಗಳ ಅನುಯಾಯಿಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು
ಸಾಮಾಜಿಕ ಹೋರಾಟಗಾರರಾದ ಪ್ರಮೋದ್ ಉಚ್ಚಿಲ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮ್ಮದ್ ಉಡುಪಿ ಜಿಲ್ಲಾಧಿಕಾರಿಗಳಿಗೆ ಮತ್ತು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರೂ ದೇವರ ಮಕ್ಕಳು ದೇವರ ಸೃಷ್ಠಿಯಲ್ಲಿ ಮೇಲು-ಕೀಲುಗಳೆಂಬುದಿಲ್ಲ, ಸರ್ವ ಜನಾಂಗಕ್ಕೂ ದೇವರನ್ನು ಪೂಜಿಸುವ ಹಕ್ಕಿದೆ. "ಎಲ್ಲರಿಗೂ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು. ಜಾತಿಯನ್ನು ಕೇಳಬೇಡ, ಹೇಳಬೇಡ, ಮನಸ್ಸಿನಲ್ಲೂ ಯೋಚಿಸಬೇಡ" ಎಂದು ಸಾರಿ ಅದ್ವೈತಾಶ್ರಮ ಎಂಬ ಹೆಸರಿನ ಸಂಸ್ಕೃತ ಶಾಲೆಯನ್ನು ಆರಂಭಿಸಿ ಅಲ್ಲಿನ ತುಳಿತಕ್ಕೊಳಗಾಗಿದ್ದ ಪರಿಶಿಷ್ಟ ಜಾತಿ-ಪಂಗಡದ ಹುಡುಗರಿಗೂ ಆಧ್ಯಾತ್ಮಿಕೋನ್ನತಿ ಕೊಟ್ಟು ಸಮಾನತೆಯನ್ನು ಉಸಿರಾಗಿಸಿ, "ವಿದ್ಯೆಯನ್ನು ಪಡೆದು ಜ್ಞಾನ ಸಂಪಾದಿಸಿ ಸ್ವತಂತ್ರರಾಗಿರಿ, ಸಂಘಟಿತರಾಗಿ ಶಕ್ತಿಯನ್ನು ಪಡೆದು ಉನ್ನತಿಯೆಡೆಗೆ ಸಾಗಿರಿ" ಎಂಬ ದಿವ್ಯ ಸಂದೇಶದ ಮೂಲಕ ಗುರುಗಳು ಅಸ್ಪೃಶ್ಯ ಸಮಾಜದ ಶಾಪ ವಿಮೋಚನೆ ಮಾಡಿದವರು.
ಅವಹೇಳನಗೈದವ ಸಮುದಾಯದ ಗುರುಗಳಿಗೆ ಅವಹೇಳನ ಮಾಡಿ ಬಿಲ್ಲವ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ನೆಲೆಯಲ್ಲಿ ಸೆಕ್ಷನ್ 153 (ಎ) ಮತ್ತು ಸೆಕ್ಷನ್ 295 (ಎ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.