ಕಟಪಾಡಿ : ಶೃದ್ಧೆ, ಶುಚಿತ್ವ ಕಾಪಾಡುವ ಮೂಲಕ ಕ್ಷೇತ್ರಗಳಲ್ಲಿ ಭಕ್ತಿ ಮೂಡಲು ಸಹಕಾರಿ. ತನ್ಮೂಲಕ ಕ್ಷೇತ್ರದ ವೃದ್ಧಿಯಾಗುತ್ತದೆ. ಶ್ರದ್ಧಾಕೇಂದ್ರಗಳು ಭಕ್ತಿ ಮತ್ತು ಶಕ್ತಿಯ ಕೇಂದ್ರಗಳು. ಏಣಗುಡ್ಡೆ ಗರಡಿಯು ಪವಿತ್ರ ದೇಗುಲವಾಗಿ ಶಕ್ತಿ ಕೇಂದ್ರವಾಗಲಿ ಎಂದು ಆರ್ಯಈಡಿಗ ಮಹಾ ಸಂಸ್ಥಾನ ಸೋಲೂರು, ಬೆಂಗಳೂರು ಇದರ ಪೀಠಾಧಿಪತಿ ಶ್ರೀಗಳಾದ ವಿಖ್ಯಾತಾನಂದ ಸ್ವಾಮೀಜಿ ಕಟಪಾಡಿ ಏಣಗುಡ್ಡೆ ಶ್ರೀ ಬ್ರಹ್ಮಬೈದೇರುಗಳ ಗರಡಿಯ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ ಹಾಗೂ ಕಾಲಾವಧಿ ಜಾತ್ರಾ ಉತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜ್ಯೋತಿ ಪ್ರಜ್ವಲಿಸಿ ಆಶೀರ್ವಚನ ನೀಡಿದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಕೋಟಿಚೆನ್ನಯರು ಸ್ವಾಭಿಮಾನದ ಧೀಮಂತಿಕೆಯ ಪ್ರತಿಪಾದಕರು. ಗರಡಿಗಳು ಸ್ವಾಭಿಮಾನದ ಸಂಕೇತ. ಈಗಾಗಲೇ ಸರಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿನಲ್ಲಿ ವಸತಿ ಶಾಲೆಗೆ ಅನುಮೋದಿಸಿದೆ. ಕೋಟಿ ಚೆನ್ನಯರ ಹೆಸರಿನಲ್ಲಿ ಸೈನಿಕ ಶಾಲೆಯ ತೆರೆಯುವ ಅಗತ್ಯವಿದೆ. ಎಂದರು.
ಗರಡಿಯಲ್ಲಿ ಸೇವೆಗೈದ ಪ್ರಮುಖರಿಗೆ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ
ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಅಧ್ಯಕ್ಷರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಜಿಲ್ಲಾ ಸಹಕಾರಿ ಮೀನುಗಾರರ ಮಾರಾಟ ಮಂಡಳಿ, ಉಡುಪಿ-ದ.ಕ ಅಧ್ಯಕ್ಷರಾದ ಯಶಪಾಲ್ ಸುವರ್ಣ, ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಿಶೋರ್ ಕುಮಾರ್ ಅಂಬಾಡಿ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಆಚಾರ್ಯ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ (ರಿ.) ಮುಲ್ಕಿ ಅಧ್ಯಕ್ಷರಾದ ಡಾ| ರಾಜಶೇಖರ್ ಕೋಟ್ಯಾನ್, ಸಮಾಜ ಸೇವಕರಾದ
ಸುರೇಶ್ ಶೆಟ್ಟಿ ಗುರ್ಮೆ, ಎಸ್.ವಿ.ಎಸ್. ವಿದ್ಯಾವರ್ಧಕ ಸಂಘ, ಕಟಪಾಡಿ ಸಂಚಾಲಕರಾದ
ಸತ್ಯೇಂದ್ರ ಪೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಚೋಕ್ಕಾಡಿ ಆಡಳಿತ ಮೊಕ್ತೇಸರರಾದ ವಿಜಯ ಕುಮಾರ್ ಶೆಟ್ಟಿ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಉಚ್ಚಿಲ ಆಡಳಿತ ಮೊಕ್ತೇಸರರಾದ ವಾಸುದೇವ ಸಾಲ್ಯಾನ್, ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್, ದೇವಾಡಿಗರ ಸಂಘದ ಅಧ್ಯಕ್ಷರಾದ ಮನೋಹರ ದೇವಾಡಿಗ, ಮುಂಬಯಿ ಸಮಿತಿಯ ಕಾರ್ಯದರ್ಶಿ ಸತೀಶ್ ಅಮೀನ್, ಗರಡಿ ಪೂಜಾ ಪೂಜಾರಿ ಇಂಪು ಪೂಜಾರಿ, ಗರಡಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಗಂಗಾಧರ ಸುವರ್ಣ, ಧಾರ್ಮಿಕ ವಿಧಿ ವಿಧಾನದ ತಂತ್ರಿಗಳಾದ ವೇದ ಮೂರ್ತಿ ಮನೋಜ್ ತಂತ್ರಿ ಶಿವಗಿರಿ ಮತ್ತು ವೇದ ಮೂರ್ತಿ ಮಹೇಶ್ ಶಾಂತಿ ಹೆಜಮಾಡಿ, ಜ್ಯೋತಿಷ್ಯ ಪ್ರವೀಣ ಮೋಹನ್ ಮಾಯಿಪ್ಪಾಡಿ ಕೇರಳ, ಗರಡಿಯ ವಾಸ್ತು ಶಿಲ್ಪಿ ಪ್ರಮಲ್ ಕುಮಾರ್, ಕಾಷ್ಠ ಶಿಲ್ಪಿ ಜಯರಾಮ್ ಆಚಾರ್ಯ, ಶಿಲಾ ಶಿಲ್ಪಿ ಸುಧೀರ್ ಆಚಾರ್ಯ ಉಪಸ್ಥಿತರಿದ್ದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗರಡಿ ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ಎನ್. ಪೂಜಾರಿ ವಹಿಸಿದ್ದರು.
ಪಲ್ಲವಿ ಏಣಗುಡ್ಡೆ ಪ್ರಾರ್ಥಿಸಿ, ಗರಡಿ ಜೀಣೋದ್ಧಾರ ಸಮಿತಿಯ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್ ಸ್ವಾಗತಿಸಿದರು. ಕೇಂಜ ಗರಡಿಯ ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್ ಪ್ರಸ್ತಾವಿಸಿದರು. ದಯಾನಂದ ಉಗ್ಗೆಲ್ ಬೆಟ್ಟು ನಿರೂಪಿಸಿ, ರಿತೇಶ್ ಕೋಟ್ಯಾನ್ ವಂದಿಸಿದರು.