ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈ ಬಾರಿಯ ನಾಲ್ಕನೇ ವರ್ಷದ ಉಡುಪಿ - ಉಚ್ಚಿಲ ದಸರಾ 2025ರಲ್ಲಿ ಶುಕ್ರವಾರ ಮುದ್ದು ಮಕ್ಕಳಿಗಾಗಿ ನಡೆದ ಮುದ್ದು ಶಾರದಾ ಮಾತೆಯ ಛದ್ಮವೇಷ ಜರಗಿತು.
ಸುಮಾರು 70 ಮಂದಿ ಮುದ್ದು ಶಾರದಾ ಮಾತೆಯ ಸ್ಪರ್ಧಿಗಳು ಭಾಗವಹಿಸಿದ್ದರು.
ಉಚ್ಚಿಲ ದೇಗುಲ ಪರಿಸರದಲ್ಲಿ ಮುದ್ದು ಶಾರದೆಯರ ಕಲರವ ಎದ್ದು ಕಾಣುತ್ತಿತ್ತು. ಮುದ್ದು ಶಾರದೆಯರನ್ನು ಕಣ್ತುಂಬಿಕೊಳ್ಳಲು ಹೆತ್ತವರ ಜೊತೆಗೆ ಸಾರ್ವಜನಿಕರು ಕಾತುರರಾಗಿದ್ದರು.
ಈ ಸಂದರ್ಭ ದ.ಕ.ಮೊಗವೀರ ಮಹಾಜನ ಸಂಘದ ಸಲಹೆಗಾರ ನಾಡೋಜ ಡಾ. ಜಿ.ಶಂಕರ್,
ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷರಾದ ಮೋಹನ್ ಬೇಂಗ್ರೆ, ದಿನೇಶ್ ಎರ್ಮಾಳು, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ನಾರಾಯಣ ಜೆ ಕರ್ಕೇರ, ಶ್ರೀಪತಿ ಭಟ್, ರಾಘವೇಂದ್ರ ಬೈಕಾಡಿ, ಗುಂಡು ಬಿ.ಅಮೀನ್, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿ ಸಾಧು ಸಾಲ್ಯಾನ್, ಶ್ರೀಪತಿ ಭಟ್, ಉಷಾ ರಾಣಿ ಬೋಳೂರು, ಮನೋಜ್ ಕಾಂಚನ್, ಸತೀಶ್ ಅಮೀನ್ ಬೆಣ್ಣೆಕುದ್ರು, ಸುಕುಮಾರ್ ಶ್ರೀಯಾನ್, ಶಿವಕುಮಾರ್ ಮೆಂಡನ್, ಸುಗುಣ ಕರ್ಕೇರ ಮತ್ತು ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.
ಮುದ್ದು ಶಾರದೆ ಛದ್ಮವೇಷ ಸ್ಪರ್ಧೆ ಫಲಿತಾಂಶ :
ಅನ್ವಿ ಎಸ್ ನಾಯಕ್ ಬ್ರಹ್ಮಾವರ (ಪ್ರಥಮ)
ವಿಶ ಎಸ್ ಪೂಜಾರಿ ಕಾರ್ಕಳ (ದ್ವಿತೀಯ)
ಆದ್ಯ ಕಲ್ಯ (ತೃತೀಯ)
ಛದ್ಮವೇಷ ಸ್ಪರ್ಧೆಗೆ ತೀರ್ಪುಗಾರರಾಗಿ ಸಹಕರಿಸಿದ ನೃತ್ಯಗಾರ್ತಿ ರಶ್ಮಿ ಸರಳಾಯ, ದೀಪ್ತಿ ಶ್ರೀ ಜೋಗಿ ಹಾಗು ಶ್ರದ್ಧಾ ಅಶ್ವಿನ್ ಪ್ರಭು ಸಹಕರಿಸಿದ್ದರು.