ಪಡುಬಿದ್ರಿ ಪಂಚಾಯತ್ಗೆ ಕಸ ಸಾಗಾಟ ವಾಹನ ಕೊಡುಗೆ
Posted On:
15-05-2022 10:35AM
ಪಡುಬಿದ್ರಿ : ಅದಾನಿ ಫೌಂಡೇಶನ್ ಹಾಗೂ ಉಡುಪಿ ಪವರ್ ಕಾರ್ಪೋರೇಷನ್ ಸಿಎಸ್‌ಆರ್ ನಿಧಿಯಿಂದ ಪಡುಬಿದ್ರಿ ಗ್ರಾಮ ಪಂಚಾಯತ್ ಗೆ ಸುಮಾರು 8.50 ಲಕ್ಷ ರೂ. ವೆಚ್ಚದ ಕಸ ಸಾಗಾಟ ವಾಹನವನ್ನು ಪಡುಬಿದ್ರಿ ಗ್ರಾಮ ಪಂಚಾಯತ್ ವಠಾರದಲ್ಲಿ ಮೇ 14 ರಂದು ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಕಿಶೋರ್ ಆಳ್ವ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ನಡೆಸುತ್ತಿರುವ ಯುಪಿಸಿಎಲ್ ಸಂಸ್ಥೆಯು ತನ್ನ ಸಿಎಸ್‌ಆರ್ ನಿಧಿಯನ್ನು ಪರಿಸರದ ಗ್ರಾಮಗಳ ಅಭಿವೃದ್ಧಿಗೆ ಬಳಸುತ್ತಿದ್ದು, ಪಡುಬಿದ್ರಿ ಗ್ರಾಪಂಗೆ ಹಂತ ಹಂತವಾಗಿ 2.77 ಕೋಟಿ ರೂ. ನೀಡಲು ಬದ್ಧವಿದೆ ಎಂದರು.
ಈ ಸಂದರ್ಭ ಯುಪಿಸಿಎಲ್ ಉಪ ಮಹಾ ಪ್ರಬಂಧಕ ರವಿ ಜೇರೆ, ಪಡುಬಿದ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋದ, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.