ಉಡುಪಿ ಜಿಲ್ಲಾ ಕುಲಾಲ ಕುಂಬಾರ ಸಂಘಟನೆ ಇಡೀ ರಾಜ್ಯಕ್ಕೆ ಮಾದರಿ : ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು
Posted On:
16-05-2022 08:44PM
ಉಡುಪಿ : ಜಿಲ್ಲಾ ಕುಲಾಲ ಕುಂಬಾರ ಸಂಘಟನೆಗಳ ಒಗ್ಗಟ್ಟು ಇಡೀ ರಾಜ್ಯಕ್ಕೆ ಮಾದರಿ, ಹಿರಿ ಕಿರಿಯ ನಾಯಕರುಗಳನ್ನ ಗಟ್ಟಿಯಾಗಿ ಬೆಸೆದು ಕ್ರೀಡಾ ಸಂಘಟನೆಯ ಮೂಲಕ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಮತ್ತೂ ರಾಜಕೀಯ ಹೋರಾಟಗಳ ಮೂಲಕ, ಇಡೀ ರಾಜ್ಯದ ಯುವ ಸಂಘಟನೆ ಗಳಿಗೆ ಪ್ರೇರಣೆ ಆಗುವಂತೆ ಬೆಳೆದು ನಿಂತ ಉಡುಪಿ ಜಿಲ್ಲಾ ಯುವ ವೇದಿಕೆ ಅದರ ಬೆಳವಣಿಗೆಗೆ ಕಾರಣರಾದ ಜಿಲ್ಲೆಯ ಎಲ್ಲಾ ಹಿರಿಯ ಯುವ ವೇಧಿಕೆಯ ನಾಯಕರುಗಳಿಗೆ ಇದರ ಶ್ರೇಯಸ್ಸು ಸಲ್ಲಬೇಕು.
ಎಂದು ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು.
ಅವರು ಕಾರ್ಕಳದಲ್ಲಿ ಕುಲಾಲ ಟ್ರೋಫಿ ಉದ್ಘಾಟಿಸಿ
ಮಾತನಾಡಿದರು.
ಇವತ್ತು ಸೇರಿದ ಇಡೀ ಜಿಲ್ಲೆಯ ಎಲ್ಲಾ ಸಂಘಟನೆ ಗಳ ಒಗ್ಗಟ್ಟು ಇದನ್ನ ಸೂಚಿಸುತ್ತೆ. ಇದೇ ರೀತಿಯಲ್ಲಿ ದುಡಿದ ಯುವ ವೇದಿಕೆಯ ಸೇವೆ ಸಂಘಟನೆ ಸರಕಾರದ ಗಮನ ಸೆಳೆದ ಬೆಳವಣಿಗೆ,ಅದರಲ್ಲೂ ಸರ್ವಜ್ಞ ವೃತ್ತವನ್ನ ನಿರ್ಮಿಸಿ ರಾಜ್ಯದಲ್ಲೇ ಸುದ್ದಿ ಆಗಿರುವ ಕಾರ್ಕಳ ಕುಲಾಲ ಯುವ ವೇದಿಕೆ ಮತ್ತು ಕಾರ್ಕಳ ಕುಲಾಲ ಸಂಘ ಇಡೀ ರಾಜ್ಯದ ಎಲ್ಲಾ ಸಂಘಟನೆ ಗಳಿಗೆ ಮಾದರಿ.
ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಸೇವೆಯನ್ನ ಪರಿಗಣಿಸಿ ಜಿಲ್ಲಾ ಹಾಗೂ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಹುಡುಕಿ ಕೊಂಡು ಬರುವ ದಿನಗಳು ದೂರ ಇಲ್ಲ ಎಂದರು.
ಈ ಸಂದರ್ಭ ಅತಿಥಿಗಳು, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.