ಸ್ಟ್ರಿಂಗ್ ಆರ್ಟ್ ನಲ್ಲಿ 2022ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲಿಸಿದ ಬಂಟಕಲ್ಲಿನ ಪ್ರಿಯಾಂಕಾ
Posted On:
24-05-2022 02:18PM
ಕಾಪು : ಬಂಟಕಲ್ಲು 92ನೇ ಹೇರೂರಿನ ಯುವ ಕಲಾವಿದೆ ಕುಮಾರಿ ಪ್ರಿಯಾಂಕಾ ಆಚಾರ್ಯ ಅವರು ಸ್ಟ್ರಿಂಗ್ ಆರ್ಟ್ ನಲ್ಲಿ 2022ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಸಾಧನೆ ಮಾಡಿದ್ದಾರೆ.
37.8 × 38 ಇಂಚಿನ ಬೋರ್ಡ್‌ನಲ್ಲಿ 20 ವಿವಿಧ ಬಣ್ಣದ ತಂತಿಗಳನ್ನು ಬಳಸಿ 3/4 ಮತ್ತು 1 ಇಂಚಿನ ಮೊಳೆಗಳನ್ನು ಬಳಸಿ ವಿರಾಟ್ ವಿಶ್ವಕರ್ಮರ ಅತಿದೊಡ್ಡ ಸ್ಟ್ರಿಂಗ್ ಆರ್ಟ್ ಭಾವಚಿತ್ರಕ್ಕಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆಯನ್ನು ಮಾಡಿದ್ದಾರೆ.
ಇವರ ಸ್ಟ್ರಿಂಗ್ ಆರ್ಟ್ ನ್ನು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಕೂಡ ಮೆಚ್ಚಿದ್ದಾರೆ. ಸ್ಟ್ರಿಂಗ್ ಆರ್ಟ್ ನಲ್ಲಿ ಸುಮಾರು 150 ಕಲಾಕೃತಿಗಳನ್ನು ಮಾಡಿರುತ್ತಾರೆ. ರಂಗೋಲಿ ಬಿಡಿಸುವುದು, ಚಿತ್ರ ಬಿಡಿಸುವುದು ಈಕೆಯ ಹವ್ಯಾಸಗಳು.
ಪ್ರಸ್ತುತ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.
ಈಕೆ ಬಂಟಕಲ್ಲ್ ನ ಕೃಷ್ಣ ಆಚಾರ್ಯ ಮತ್ತು ಯಶೋದ ದಂಪತಿಗಳ ಪುತ್ರಿ.