ಶಂಕರಪುರ : ಆರೋಗ್ಯ ತಪಾಸಣೆಯ ನೆಪದಲ್ಲಿ ವೈದ್ಯನಿಂದ ಮಹಿಳೆಯ ಮಾನಭಂಗಕ್ಕೆ ಯತ್ನ
Posted On:
14-06-2022 11:37PM
ಶಿರ್ವ : ಇಲ್ಲಿನ ಕ್ಲಿನಿಕ್ ಒಂದರ ವೈದ್ಯ ಪತಿಯೊಂದಿಗೆ ಆರೋಗ್ಯ ತಪಾಸಣೆಗೆ ಬಂದಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಶಂಕರಪುರದಲ್ಲಿರುವ ಶ್ರೀನಿವಾಸ ಆರೋಗ್ಯಾಲಯ ಕ್ಲಿನಿಕ್‌ಗೆ ಹೋಗಿದ್ದ ಸಮಯ ಅಲ್ಲಿನ ವೈದ್ಯ ಡಾ| ಮುರಳೀಕೃಷ್ಣ ಭಟ್ ತಪಾಸಣೆಯ ನೆಪದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.
ವೈದ್ಯರ ವಿರುದ್ಧ ಮಹಿಳೆ ನೀಡಿದ ದೂರಿನನ್ವಯ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.