ಕುತ್ಯಾರು : ಅಸೆಟ್ ಗೆ ನೂತನ ಅಧ್ಯಕ್ಷರಾಗಿ ಮೋಹನ್ ಕುಮಾರ್ ಬೆಳ್ಳೂರು
Posted On:
18-06-2022 04:54PM
ಕಾಪು : ಪಡುಕುತ್ಯಾರುವಿನ ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಮೋಹನ್ ಕುಮಾರ್ ಬೆಳ್ಳೂರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಅಸೆಟ್ ನ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾಯಾಧ್ಯಕ್ಷರಾಗಿ ಪೃಥ್ವೀರಾಜ್ ಆಚಾರ್ಯ ಕಿನ್ನಿಗೋಳಿ, ಪ್ರಧಾನ ಕಾಯದರ್ಶಿಯಾಗಿ ಕೆ.ಜೆ. ಗುರುರಾಜ್ ಆಚಾರ್ಯ ಮಂಗಳೂರು, ಕೋಶಾಧಿಕಾರಿಯಾಗಿ ಬಿ. ಸೂರ್ಯ ಕುಮಾರ್ ಹಳೆಯಂಗಡಿ, ಉಪಾಧ್ಯಕ್ಷರಾಗಿ ವಿವೇಕ್ ಆಚಾರ್ಯ ಮಂಚಕಲ್, ಎನ್. ಹರಿಶ್ಚಂದ್ರ ಆಚಾರ್ಯ ಬೆಂಗಳೂರು, ಕಾರ್ಯದರ್ಶಿಗಳಾಗಿ ಬೆಳುವಾಯಿ ಸೀತಾರಾಮ ಆಚಾರ್ಯ, ಕೆ.ರಾಘವೇಂದ್ರ ಆಚಾರ್ಯ ಉಡುಪಿ ಆಯ್ಕೆಯಾದರು.
ವಿಶ್ವಸ್ಥ ಮಂಡಳಿಯ ವಿಶ್ವಸ್ಥರಾಗಿ ತ್ರಾಸಿ ಸುಧಾಕರ ಆಚಾರ್ಯ, ನಾಗರಾಜ ಆಚಾರ್ಯ ಕಾಡಬೆಟ್ಟು, ಜಿ.ಟಿ ಆಚಾರ್ಯ ಮುಂಬಯಿ, ರಾಜಗೋಪಾಲ ಆಚಾರ್ಯ ಮಂಗಳೂರು, ಆನಂದ ಆಚಾರ್ಯ ಮದ್ಯ, ಶ್ರೀಧರ ಆಚಾರ್ಯ ಕಟಪಾಡಿ, ಜಯಪ್ರಕಾಶ ಆಚಾರ್ಯ ಕುಡ್ಚಿಲ, ಉಮೇಶ ಆಚಾರ್ಯ ಕಡೇಶ್ವಾಲ್ಯ, ವಿಶ್ವನಾಥ ಆಚಾರ್ಯ ಉಚ್ಚಿಲ, ಹರೀಶ್ ಆಚಾರ್ಯ ಕಾರ್ಕಳ ಆಯ್ಕೆಗೊಂಡರು.
ಖಾಯಂ ಆಹ್ವಾನಿತರನ್ನು, ಸಲಹಾ ಮಂಡಳಿಯ ಸದಸ್ಯರನ್ನೂ ಇದೇ ವೇಳೆ ಆಯ್ಕೆ ಮಾಡಲಾಯಿತು. ಶ್ರೀ ಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು.
ಸಭೆಯಲ್ಲಿ ವೆಂಕಟರಮಣ ಆಚಾರ್ಯ, ಬಿ.ಜಿ.ರಮೇಶ್ ಆಚಾರ್ಯ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ ಅವರು ನೂತನ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ, ಬೆಳುವಾಯಿ, ಸುಂದರ ಆಚಾರ್ಯ ಬೆಳುವಾಯಿ, ಜಯಕರ ಆಚಾರ್ಯ ಕರಂಬಳ್ಳಿ ಮುಂತಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿ, ಅಸೆಟ್ ಪ್ರಧಾನ ಕಾರ್ಯದರ್ಶಿ ಕೆ.ಜೆ.ಗುರುರಾಜ ಆಚಾರ್ಯ ಮಂಗಳೂರು ವಂದಿಸಿದರು.