ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಅವಘಡ - ವ್ಯಕ್ತಿ ಮೃತ

Posted On: 23-06-2022 11:27PM

ಸುರತ್ಕಲ್ : ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಕೌಂಟರ್‌ ವೇಟ್ ತಾಗಿ ವ್ಯಕ್ತಿಯೋರ್ವ ಗಾಯಗೊಂಡಿದ್ದು ಗಾಯಾಳುವನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತ ಪಟ್ಟಿರುವ ಘಟನೆ ಜೂನ್ 22 ರಂದು ನಡೆದಿದೆ.

ಮೃತ ವ್ಯಕ್ತಿ ಕೇಶವ (47) ಕುತ್ತೆತ್ತೂರು ಗ್ರಾಮದ ಎಂ ಆರ್ ಪಿ ಎಲ್ ವರ್ಕ್ ಶಾಪ್ ಬಳಿ ಗುತ್ತಿಗೆ ಆಧಾರದಲ್ಲಿ ರಿಗ್ಗರ್ ಕೆಲಸ ಮಾಡಿಕೊಂಡಿದ್ದರು.

ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಟ್ರೇಲರ್ ನಲ್ಲಿ ಇದ್ದ ಕೌಂಟರ್‌ ವೇಟ್ ನ್ನು ಎಂ ಆರ್ ಪಿ ಎಲ್ ಗೆ ಸಂಬಂಧಿಸಿದ ಕ್ರೇನ್ ಮುಖೇನ ಅನ್ ಲೋಡ್ ಮಾಡುವಾಗ ಕೌಂಟರ್‌ ವೇಟ್ ತಾಗಿ ಈ ಅವಘಡ ಸಂಭವಿಸಿದೆ.

ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.