ಕಟಪಾಡಿ : ಶ್ರೇಷ್ಠ ನಾದಸ್ವರ ವಾದಕ ಅಗ್ರಹಾರ ಚಂದಯ್ಯ ಶೇರಿಗಾರ್ ವಿಧಿವಶ
Posted On:
30-06-2022 07:01PM
ಕಟಪಾಡಿ : ನಾಡಿನ ಶ್ರೇಷ್ಠ ನಾದಸ್ವರ ವಾದಕರಾಗಿ ಹೆಸರುವಾಸಿಯಾಗಿರುವ ಅಗ್ರಹಾರ ಚಂದಯ್ಯ ಶೇರಿಗಾರ್ ರವರು ಜೂನ್ 30 ರ ಬೆಳಿಗ್ಗೆ ತಮ್ಮ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ದೈವಾಧೀನರಾದರು.
ಶ್ರೀಯುತ ಅಪ್ಪು ಶೇರಿಗಾರ್ ಹಾಗೂ ಶ್ರೀಮತಿ ಸೀತು ಸೇರಿಗಾರ್ತಿ ರವರ ಸುಪುತ್ರರು. ಬಾಲ್ಯದಿಂದಲೇ ತಂದೆಯಿಂದ ನಾಗಸ್ವರ ವಾದನವನ್ನು ಕರಗತ ಮಾಡಿಕೊಂಡು ಎಲ್ಲರ ಜನಮನ ಗೆದ್ದವರು. ಹಲವಾರು ಸನ್ಮಾನಗಳಿಗೆ ಭಾಜನರಾದರು.
ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.
ಇವರು ನೀಡಿದ ಕೊಡುಗೆಗೆ ಸನ್ಮಾನ ನೀಡಿದ ಸಂಘ ಸಂಸ್ಥೆಗಳು :
ಸಾವಿರಾಳು ಧೂಮಾವತಿ ದೈವಸ್ಥಾನ ಫಾರೆಸ್ಟ್ ಗೇಟ್ ಏಣಗುಡ್ಡೆ ಕಟಪಾಡಿ, ಲಯನ್ಸ್ ಕ್ಲಬ್ ಕಟಪಾಡಿ, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್, ಉಡುಪಿ ಜಿಲ್ಲಾ ಯುವ ವೇದಿಕೆ, ಉಡುಪಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ, ದೇವಾಡಿಗರ ಸೇವಾ ಸಂಘ ಕಟಪಾಡಿ,
ಹಳೆ ವಿದ್ಯಾರ್ಥಿ ಸಂಘ ಶ್ರೀ ದುರ್ಗಾಪರಮೇಶ್ವರಿ ಶಾಲೆ ಅಗ್ರಹಾರ.
ಸೇವೆ ಸಲ್ಲಿಸಿದ ಕ್ಷೇತ್ರಗಳು :
ಅಗ್ರಹಾರ ದುರ್ಗಾಪರಮೇಶ್ವರಿ ದೇವಸ್ಥಾನ. ಕಟಪಾಡಿ, ಕಾಳಿಕಾಂಬ ದೇವಸ್ಥಾನ ಅಗ್ರಹಾರ ಕಟಪಾಡಿ, ಚೊಕ್ಕಾಡಿ ಮಹಾಲಿಂಗೇಶ್ವರ ದೇವಸ್ಥಾನ ಕಟಪಾಡಿ, ವಿಷ್ಣು ಮೂರ್ತಿ ದೇವಸ್ಥಾನ ಮಟ್ಟು ಕಟಪಾಡಿ, ಕಾಪು ಮಾರಿಗುಡಿ, ಜುಮಾದಿ ದೈವಸ್ಥಾನ ಫಾರೆಸ್ಟ್ ಗೇಟ್ ಕಟಪಾಡಿ, ನೀಚ ದೈವಸ್ಥಾನ ದುರ್ಗಾನಗರ ಕಟಪಾಡಿ ಹಾಗೂ ಕಾಪು, ಪಾಂಗಳ, ಕಟಪಾಡಿ, ಶಂಕರಪುರ, ಉದ್ಯಾವರ ಸುತ್ತಮುತ್ತ ಧಾರ್ಮಿಕ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.