ಉಡುಪಿ : ನಾರಾಯಣಗುರುಗಳ ವಿಷಯವನ್ನು ಸಮಾಜ ವಿಜ್ಞಾನ ಪುಸ್ತಕದಿಂದ ತೆಗೆದದ್ದು ಅಕ್ಷಮ್ಯ ಅಪರಾಧ ; ಸರಿಪಡಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
Posted On:
08-07-2022 05:40PM
ಉಡುಪಿ : ಎಸೆಸೆಲ್ಸಿ ಸಮಾಜ ವಿಜ್ಞಾನ ಪಠ್ಯದಲ್ಲಿ ನಾರಾಯಣಗುರುಗಳ ಪಠ್ಯ ತೆರವು ಮಾಡಿದ್ದರ ವಿರುದ್ಧ ಬಿಲ್ಲವ ಸಮಾಜದ ಎಲ್ಲ ಸಂಘಸಂಸ್ಥೆಗಳು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಇಂದು
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದರು.
ಈ ವೇಳೆ ಪ್ರೆತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲೆಯ ಬಿಲ್ಲವ ಮುಖಂಡರು ರಾಜಕೀಯ ಮುಖಂಡರು ಈ ತಪ್ಪನ್ಬು ಸರಿಪಡಿಸದಿದ್ದರೆ ಮುಂದೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ನಾರಾಯಣ ಗುರುಗಳು ಅಸ್ಪೃಶ್ಯ ಸಮಾಜಕ್ಕೆ ಬೆಳಕು ನೀಡಿದವರು. ಅವರ ಪಠ್ಯವನ್ನು ಹತ್ತನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಿಂದ ತೆಗೆದದ್ದು ಅಕ್ಷಮ್ಯ ಅಪರಾಧ. ಈ ತಪ್ಪನ್ನು ಸರಕಾರ ಸರಿಪಡಿಸಬೇಕು ಎಂದರು.
ಭಾರೀ ಸಂಖ್ಯೆಯ ಬಿಲ್ಲವರು ಪಕ್ಷಬೇಧ ಮರೆತು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್ ಶಂಕರ್ ಪೂಜಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ವಕೀಲರಾದ ಪದ್ಮರಾಜ್ ಮಂಗಳೂರು, ಕಟಪಾಡಿ ಶಂಕರ್ ಪೂಜಾರಿ, ರಮೇಶ್ ಕಾಂಚನ್ ,ವಿಶ್ವನಾಥ ಕ್ಷೇತ್ರದ ಪದಾಧಿಕಾರಿಗಳು, ಬಿಲ್ಲವ ಮುಖಂಡರು ಉಪಸ್ಥಿತರಿದ್ದರು.