ಕಾಪು : ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ವತಿಯಿಂದ ನಾಳೆ ಆಚರಿಸುತ್ತಿರುವ ಈದುಲ್ ಅದ್ಹಾ ಹಬ್ಬದಂದು ಕುರ್ಬಾನಿ ಮಾಡಲು, ಮತ್ತು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅದ್ಯಕ್ಷರಾದ ಶರ್ಫುಧ್ದೀನ್ ಶೇಖ್ ಇವರ ನೇತ್ರತ್ವದಲ್ಲಿ ಕಾಪು ಪೊಲಿಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತಕರ ಘಟಕದ ಉಪಾದಾಕ್ಷರಾದ ಹಮೀದ್ ಯೂಸುಫ್, ಯೂತ್ ಕಾಂಗ್ರೆಸ್ ಅದ್ಯಕ್ಷರಾದ ರಮೀಜ್ ಹುಸೈನ್, ಜಿಲ್ಲಾ ಕಾಂಗ್ರೆಸ್ ಮೀನುಗಾರರ ವೇದಿಕೆಯ ಅದ್ಯಕ್ಷರಾದ ರಾಜೇಶ್ ಮೆಂಡನ್, ಹಿಂದುಳಿದ ವರ್ಗದ ಅದ್ಯಕ್ಷರಾದ ದೀಪಕ್ ಕುಮಾರ್, ಅಲ್ಪಸಂಖ್ಯಾತರ ಉಪಾದ್ಯಕ್ಷರಾದ ನಸೀರ್ ಕಾಪು, ಮಜೂರು ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷರಾದ ನಾಗಭೂಷಣ್ ರಾವ್, ಯುವ ಕಾಂಗ್ರೆಸ್ ಉಪಾದ್ಯಕ್ಷರಾದ ಸುಲಕ್ಷನ್ ಪೂಜಾರಿ, ಕಾಂಗ್ರೆಸ್ ಮುಂಖಡರಾದ ಬಾಷು ಸಾಹೇಬ್, ಉಸ್ಮಾನ್ ಮಲ್ಲಾರ್, ಸಿರಾಜುದ್ದೀನ್, ಅಲ್ ರೆಹಾನ್ ಮಲ್ಲಾರ್ ಇನ್ನಿತರರು ಉಪಸ್ಥಿತರಿದ್ದರು.