ಪ್ರತಿಭೆಗಳನ್ನು ಬರಹದ ಮೂಲಕ ಅನಾವರಣಗೊಳಿಸಿದ ಬರಹಗಾರ, ಕಲಾ ಸಂಘಟಕ - ಪ್ರಭಾಕರ ಬೆಳುವಾಯಿ
Posted On:
10-07-2022 03:56PM
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ಲಾಡಿ ಮನೆ ದಿ. ಬಾಬು ಪೂಜಾರಿ ಹಾಗೂ ಬೆಳುವಾಯಿ ಮಿತ್ತಬೆಟ್ಟು ಬರ್ಕೆ ಕೆಳಗಿನಮನೆ ಗೋಪಿ ಪೂಜಾರಿ ದಂಪತಿಗಳ ಮಗನಾಗಿರುವ ಪ್ರಭಾಕರ ಇವರು ಜೀವನಕ್ಕಾಗಿ ಮುಂಬೈ ನಲ್ಲಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿದರು ಆ ಬಿಡುವಿಲ್ಲದ ಜೀವನದ ನಡುವೆಯೂ ತನ್ನಲ್ಲಿ ಇರುವ ಪ್ರತಿಭೆನ ಬೆಳೆಸಿದ ಉತ್ಸಾಹಿ ಯುವ ಬರಹಗಾರ ಪ್ರಭಾಕರ್ ಬೆಳುವಾಯಿ. ವ್ಯಕ್ತಿ ಪರಿಚಯ, ನಾಟಕ ವಿಮರ್ಶೆ, ಕಥೆ, ಕವನ, ವೈಚಾರಿಕ ಲೇಖನಗಳ ಮೂಲಕ ಪರಿಚಯವಾದರು.
ತೆರೆಯ ಮರೆಯಲ್ಲಿ ಇರುವ ಮುಂಬೈ ಹಾಗೂ ತನ್ನ ತವರೂರಾದ ತುಳುನಾಡಿನ ಯುವ ಪ್ರತಿಭೆಗಳ ಪರಿಚಯಿಸುವುದರ ಜೊತೆಗೆ ಅವರ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟ ಒಬ್ಬ ಕಲಾ ಪೋಷಕ. ಅದೆಷ್ಟೋ ಸಾಹಿತಿಗಳು, ಕಲಾವಿದರು, ಕಲಾ ಪೋಷಕರು, ಸಮಾಜಸೇವಕರು, ವೀರ ಯೋಧರನ್ನೂ ಗುರುತಿಸಿ ಸನ್ಮಾನಿಸಿದ ಹೆಗ್ಗಳಿಕೆ ಇವರದು.
ಕಳೆದ 17 ವರ್ಷಗಳ ಹಿಂದೆ ನಮನ ಫ್ರೆಂಡ್ಸ್ ಮುಂಬಯಿ ಎಂಬ ಸಂಘ ಸಂಸ್ಥೆಯ ಮೂಲಕ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ ಕೀರ್ತಿ ಇವರದು. ಹಾಗೆಯೇ ಅನೇಕ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿಕೊಟ್ಟು. ಅನೇಕ ಸಂಘ ಸಂಸ್ಥೆಗಳಲ್ಲಿ ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡ ನಮ್ಮ ತುಳುನಾಡಿನ ಹೆಮ್ಮೆಯ ಯುವ ಮಾಣಿಕ್ಯ. ಅಷ್ಟು ಮಾತ್ರ ಅಲ್ಲದೆ 2018 ರಲ್ಲಿ ನಡೆದ ಸೌಂದರ್ಯ ಸ್ಪರ್ಧೆ ಮಿಸ್ಟರ್ ಅಂಡ್ ಮಿಸ್ ಕರಾವಳಿ ಹಾಗೂ 2019 ರಲ್ಲಿ ಪುಣೆಯಲ್ಲಿ ಸೂರ್ಯ ಪೂಜಾರಿ ಇವರ ನೇತೃತ್ವದ ನಮ್ಮ ತುಳುವೆರ್ ಆಯೋಜನೆಯ ಮಿಸ್ಟರ್ ಅಂಡ್ ಮಿಸ್ ಫೇಸ್ ಆಫ್ ಕರ್ನಾಟಕ ಸೌಂದರ್ಯ ಸ್ಪರ್ಧೆಯ ಯಶಸ್ವಿನ ಮೂಲ ರೂವಾರಿ ಇವರೇ ಆಗಿದ್ದರು.
ಉತ್ಸಾಹಿ ಯುವ ಬರಹಗಾರನ ಈ ಪ್ರತಿಬೆಗೆ ಅನೇಕ ಪ್ರಶಸ್ತಿ ಪುರಸ್ಕಾರ ದೊರಕಿದೆ.
ಅಶ್ವಿನಿ ಪ್ರಕಾಶನ ಗದಗ ಆಯೋಜಿಸಿದ ಅಖಿಲ ಕರ್ನಾಟಕ ಸ್ವರಚಿತ ಕವನ ಸ್ವರ್ಧೆಯಲ್ಲಿ ಭಾಗವಹಿಸಿ ಬಹುಮಾನ ಮುಡಿಗೇರಿಸಿಕೊಂಡಿರುವುದು ಮಾತ್ರವಲ್ಲದೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿಮಾನಕ್ಕೆ "ಸುಪ್ತ ಪ್ರತಿಭೆಗಳ ಪ್ರಕಟಕ", "ಪ್ರತಿಭಾ ವಲ್ಲಭ" ಹಾಗೆಯೇ ರಂಗ್ ಮಂಚ್ ಕಾಮ್ಗರ್ ಸಂಸ್ಥೆ(ರಿ.) ಆಶ್ರಯದಲ್ಲಿ ಜರುಗಿದ ಅನಘಾ ಇವೆಂಟ್ ಮತ್ತು ಡಿ. ಎಸ್ ಎಂಟರ್ಟೈನ್ಮೆಂಟ್ ಹಿಂದಿ ಮತ್ತು ಮರಾಠಿ ಸಿನಿಮಾ ತಂತ್ರಜ್ಞರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ "ಬ್ಯಾಕ್ ಸ್ಟೇಜ್ ಹೀರೊ-2019" ಹೀಗೆ ಅನೇಕ ಪ್ರಶಸ್ತಿ ಬಿರುದುಗಳು ದೊರಕಿದೆ ಇವರ ನಿಸ್ವಾರ್ಥ ಸೇವೆಗೆ.
2020 ಯಲ್ಲಿ ನಮನ ಫ್ರೆಂಡ್ಸ್ ಮುಂಬೈ ಇದರ 15 ನೇ ವಾರ್ಷಿಕೋತ್ಸವದ ಸಂಭ್ರಮ ಆಚರಣೆಯಲ್ಲಿ ರಾಷ್ಟ್ರ ಪ್ರೇಮ, ಮಾತೃ ಪ್ರೇಮ, ಕಲಾ ಪಪ್ರೇಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟ ಹೆಗ್ಗಳಿಕೆ ಇವರದು.
ಹೀಗೆ ತನ್ನ ಕಲಾಪ್ರೇಮದಿಂದ ಇನ್ನಷ್ಟು ಪ್ರತಿಭೆಗಳಿಗೆ ಪ್ರೋತ್ಸಹ ಸಿಗುವಂತಾಗಲಿ ದೇವರು ಇವರಿಗೆ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಇನ್ನಷ್ಟು ಒಳ್ಳೆಯ ಅವಕಾಶ ಸಿಗಲಿ.
ಹಾಗೆಯೇ ಇವರು ನಂಬಿರುವ ನಾರಾಯಣ ಗುರು,ಕೋಟಿ ಚೆನ್ನಯ್ಯರ,ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತುಲ್ ,ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ವಿಶ್ವನಾಥ ಕ್ಷೇತ್ರ ಕಟಪಾಡಿ ದೇವರ ಅನುಗ್ರಹ ಸದಾ ಇವರ ಮೇಲಿರಲಿ. ಶುಭವಾಗಲಿ.
ಬರಹ : ಪ್ರಶಾಂತ್ ಅಂಚನ್ ಉಡುಪಿ (ಮಸ್ಕತ್ತ್ )