ಕಾಪು : ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಕಾರೊಂದಕ್ಕೆ ಹಾನಿಯಾದ ಘಟನೆ ಜುಲೈ 16ರಂದು ಕಾಪುವಿನಲ್ಲಿ ನಡೆದಿದೆ.
ರೋಹಿತ್ ಆರ್ ಭಟ್ ಇವರು ಕೆಲಸಗಾರರಾದ ಮಂಜುನಾಥರವರೊಂದಿಗೆ ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ-ಮಂಗಳೂರು ರಸ್ತೆಯಲ್ಲಿ ಬೆಳಿಗ್ಗೆ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ ಕಾಪುವಿನ ಮಹಾವೀರ ಟಾಕೀಸ್ ನ ಎದುರು ರಸ್ತೆಯ ಬಲಗಡೆ ಹೋಗುತ್ತಿರುವಾಗ ಕಾರ್‌ನ ಸಮಾನಾಂತರವಾಗಿ ಎಡಬದಿಯಲ್ಲಿ ಹೋಗುತ್ತಿದ್ದಾಗ ಲಾರಿಯೊಂದರ ಚಾಲಕನು ನಿರ್ಲಕ್ಷ್ಯತನದಿಂದ ಏಕಾಏಕಿಯಾಗಿ ಲಾರಿಯನ್ನು ಬಲಗಡೆ ಚಲಾಯಿಸಿಕೊಂಡು ಬಂದ ಪರಿಣಾಮ ಕಾರ್‌ನ ಎಡಬದಿಗೆ ಲಾರಿಯ ಬಲಬದಿಯ ಚಕ್ರಗಳು ಹಾಗು ಲಾರಿಯ ಬಾಡಿ ತಗುಲಿ, ಕಾರ್‌ನ ಎಡಬದಿಯ ಮುಂದಿನ ಬಂಪರ್, ಎಡಬದಿಯ ಎರಡು ಬಾಗಿಲುಗಳು ಹಾಗು ಬಾಗಿಲಿನ ಹಿಂಭಾಗದ ಬಾಡಿ. ಕಾರಿನ ಬಲಭಾಗದ ಟೈರ್ ಜಖಂಗೊಂಡಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.