ಉಡುಪಿ : ಚೈತನ್ಯ ಕಲಾವಿದರು ಬೈಲೂರು ತಂಡದ 8ನೇ ನಾಟಕ ವಾರ್ಡ್ ನಂಬರ್-2 ಇದರ ಶುಭ ಮುಹೂರ್ತವು ಜು. 15ರಂದು ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಿತು.
ನೂತನ ಕಲಾ ಕುಸುಮವನ್ನು ಬೆಂಗಳೂರು ತುಳುವರ ಚಾವಡಿ ಅಧ್ಯಕ್ಷ ಡಿ. ಪುರುಷೋತ್ತಮ ಪೂಂಜ ಬಿಡುಗಡೆಗೊಳಿಸಿದರಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಭಟ್ ಕೌಡೂರು ಶುಭ ಮುಹೂರ್ತದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಶುಭ ಹಾರೈಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ, ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಶ ಪೂಜಾರಿ, ಬೈಲೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ಪ್ರಸಾದ ಐಸಿರ, ಸಂದೀಪ್ ಮಾಡ, ಆನಂದ ಪೂಜಾರಿ, ಸದಾನಂದ ಸಾಲಿಯಾನ್, ಗುರುರಾಜ್ ಮಾಡ, ಕೃಷ್ಣ ಶೆಟ್ಟಿ, ಸುಬ್ರಹ್ಮಣ್ಯ, ಹರೀಶ್ ಆಚಾರ್ಯ, ಪ್ರಿಯಾ ಪ್ರಸನ್ನ ಶೆಟ್ಟಿ, ಬಲೆ ತೆಲಿಪಾಲೆ ಖ್ಯಾತಿಯ ಪ್ರಶಂಸ ತಂಡದ ಕಲಾವಿದರಾದ ಸಂದೀಪ್ ಶೆಟ್ಟಿ, ಮರ್ವಿನ್ ಶಿರ್ವ, ಶರತ್ ಉಚ್ಚಿಲ, ಸುರೇಶ್ ಸಾಯಿರಾಮ್, ಕಾಪು ರಂಗ ತರಂಗ ತಂಡದ ಸದಸ್ಯರು, ಚೈತನ್ಯ ತಂಡದ ಕಲಾವಿದರು, ಕಲಾಪ್ರೋತ್ಸಾಹಕರು ಉಪಸ್ಥಿತರಿದ್ದರು.