ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಟಪಾಡಿ : ಮಟ್ಟು ಬ್ರಿಡ್ಜ್ ಬಳಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

Posted On: 17-07-2022 01:20PM

ಕಾಪು ತಾಲೂಕಿನ ಕಟಪಾಡಿಯ ಮಟ್ಟು ಬ್ರಿಡ್ಜ್ ಬಳಿ ಸುಮಾರು 50 ರಿಂದ 55 ವರ್ಷ ಪ್ರಾಯದ ವ್ಯಕ್ತಿಯ ಅಪರಿಚಿತ ಶವವೊಂದು ಕೊಳೆತ ರೀತಿಯಲ್ಲಿ ಪತ್ತೆಯಾಗಿದ್ದು, ಈ ಶವವು ಬೆಳಿಗ್ಗೆ ಸುಮಾರು 10.30 ರ ವೇಳೆಗೆ ಪಾಂಗಾಳ ಭಾಗದಲ್ಲಿ ಕಟಪಾಡಿ ಕಡೆಗೆ ತೇಲಿಕೊಂಡು ಹೋಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಕಟಪಾಡಿ ಬ್ರಿಡ್ಜ್ ಬಳಿ ಹೊಂದಿಕೊಂಡು ಪತ್ತೆಯಾದ ಈ ಅಪರಿಚಿತ ಶವವನ್ನು ಸೂರಿ ಶೆಟ್ಟಿ ಕಾಪು ನೇತೃತ್ವದಲ್ಲಿ ಮೇಲಕ್ಕೆ ಎತ್ತಿ, ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಕಾಪು ಠಾಣಾಧಿಕಾರಿ ಶ್ರೀಶೈಲಂ ಮುರಗೋಡು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.