ಉಡುಪಿ : ಭಾರತೀಯ ಜನತಾಪಾರ್ಟಿ, ಉಡುಪಿ ನಗರ ಇವರ ಆಶ್ರಯದಲ್ಲಿ ಶ್ರೀದೇವಿ ಅಂಜನೇಯ ಫ್ರೆಂಡ್ಸ್ (ರಿ.) ಕಿದಿಯೂರು ಪಡುಕೆರೆ, ಶ್ರೀ ಬಾಲಾಂಜನೇಯ ಪೂಜಾ ಮಂದಿರ, ಕಿದಿಯೂರು ಪಡುಕೆರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಇವರ ಸಹಭಾಗಿತ್ವದಲ್ಲಿ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ 8 ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಸೇವೆ ಬಡವರ ಕಲ್ಯಾಣ, ಸುಶಾಸನ
ಕಾರ್ಯಕ್ರಮದ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮ ಮಲ್ಪೆ ಪಡುಕೆರೆ ಶ್ರೀ ದೇವಿ ಆಂಜನೇಯ ವಠಾರದಲ್ಲಿ ಜರಗಿತು.
ಈ ಸಂದರ್ಭ ಗಣ್ಯರು, ಪಕ್ಷದ ಪ್ರಮುಖರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.