ಶಿರ್ವ ವಿಶ್ವಬ್ರಾಹ್ಮಣ ಯುವ ಸಂಗಮ ಮತ್ತು ಮಹಿಳಾ ಬಳಗದ ವತಿಯಿಂದ ಆಷಾಢ ಸಂಭ್ರಮ
Posted On:
19-07-2022 02:01PM
ಶಿರ್ವ : ಇಲ್ಲಿನ ವಿಶ್ವಬ್ರಾಹ್ಮಣ ಯುವ ಸಂಗಮ (ರಿ.) ಮತ್ತು ಮಹಿಳಾ ಬಳಗದ ವತಿಯಿಂದ ಶಿರ್ವದ ಹೋಟೆಲ್ ಮಂದಾರದ ಸಭಾಂಗಣದಲ್ಲಿ ನಡೆದ ಆಷಾಢ ಸಂಭ್ರಮ ಕಾರ್ಯಕ್ರಮವು ಜರಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮುದರಂಗಡಿ ನಿಶಾ ಕೊ. ಸೋ. ಲಿ. ಇದರ ಆಡಳಿತ ನಿರ್ದೇಶಕಿ ನಿಶಾ ಆಚಾರ್ಯ ಹಿಂದಿನ ಕಾಲದಲ್ಲಿ ಆಟಿ ತಿಂಗಳು ಹೇಗಿತ್ತು. ಈಗ ಹೇಗಿದೆ. ಅಂದಿನ ಬಡತನದ ಬದುಕೇ ಆಟಿಡೊಂಜಿ ದಿನ ಅಭಿಪ್ರಾಯಪಟ್ಟರು.
ಆಟಿ ತಿಂಗಳು ಮತ್ತು ಶ್ರಾವಣ ಮಾಸದ ಧಾರ್ಮಿಕ ಆಚರಣೆ ಬಗ್ಗೆ ಸಾಂತೂರು ವಿಶ್ವಕಲಾ ಮಹಿಳಾ ಮಂಡಲದ ಅಧ್ಯಕ್ಷೆ ವಸಂತಿ ಮೋಹನ ಆಚಾರ್ಯ ಮಾಹಿತಿ ನೀಡಿದರು. ಅಧ್ಯಕ್ಷರಾದ ಉಮೇಶ್ ಆಚಾರ್ಯರು ನಮ್ಮ ಹಿರಿಯರು ಯಾವ ರೀತಿಯಿಂದ ನಮ್ಮನ್ನು ಸಾಕಿ ಬೆಳೆಸಿದ್ದಾರೆ ಅದನ್ನು ನೆನಪಿಟ್ಟು ನಾವು ಬದುಕಬೇಕು ಎಂದು ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ತಿಳಿಸಿದರು.
ಗೌರವಾಧ್ಯಕ್ಷ ಸುರೇಶ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಆಚಾರ್ಯ, ಕಾರ್ಯದರ್ಶಿ ಪ್ರೀತಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿದರು. ಕಾರ್ಯದರ್ಶಿ ಮಾಧವ ಆಚಾರ್ಯ ಸ್ವಾಗತಿಸಿದರು.
ಶರ್ಮಿಳಾ ಆಚಾರ್ಯ ಪರಿಚಿಸಿದರು. ಕೋಶಾಧಿಕಾರಿ ಪ್ರಶಾಂತ್ ಆಚಾರ್ಯ ವಂದಿಸಿದರು. ಪ್ರೀತಮ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಆಟಿಯ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಹಿಳಾ ಬಳಗದ ಸದಸ್ಯರು ಉಣ ಬಡಿಸಿದರು.