ಮಳೆಗಾಲದ ನೀರು ತುಂಬಿದ್ದ ಕಲ್ಲಿನ ಕ್ವಾರೆಯಲ್ಲಿ ಈಜಲು ಹೋಗಿ ಮೃತಪಟ್ಟ ಯುವಕ
Posted On:
24-07-2022 11:44PM
ಮಂಗಳೂರು : ಕ್ರಿಕೆಟ್ ಆಟದ ಬಳಿಕ ಕೆಂಪು ಕಲ್ಲಿನ ಕ್ವಾರೆಯಲ್ಲಿ ಮಳೆಗಾಲದ ನೀರು ತುಂಬಿದ ಹೊಂಡದಲ್ಲಿ ಈಜಲು ಹೋಗಿ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ ಉಲೈಬೆಟ್ಟು ಕಾಯರಪದವು ಎಂಬಲ್ಲಿ ನಡೆದಿದೆ.
ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಲೈಬೆಟ್ಟು ಕಾಯರಪದವು ಎಂಬಲ್ಲಿ ಶಿಯಾಬ್ ಹಾಗೂ ಆತನ ಗೆಳೆಯರು ಕ್ರಿಕೆಟ್ ಆಟವಾಡಿ ನಂತರ ಅಲ್ಲಿಯೇ ಆಟದ ಮೈದಾನದ ಪಕ್ಕದ್ದಲ್ಲಿ ಕೆಂಪು ಕಲ್ಲಿನ ಕ್ವಾರೆ ಮಳೆಗಾಲದ ನೀರು ತುಂಬಿದ ಹೊಂಡದಲ್ಲಿ ಈಜಲು ಹೋಗಿ ಜೋಕಟ್ಟೆ ನಿವಾಸಿ ಶಿಯಾಬ್ (21) ಎಂಬ ಹುಡುಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.