ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ರೋಟರಾಕ್ಟ್ ಕ್ಲಬ್ ಸುಭಾಷ್ ನಗರ ಪದಗ್ರಹಣ

Posted On: 01-08-2022 11:02PM

ಶಿರ್ವ : ರೋಟರಾಕ್ಟ್ ಕ್ಲಬ್ ಸುಭಾಷ್ ನಗರದ 2022-23 ನೇ ವರ್ಷಕ್ಕೆ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 30ರಂದು ರೋಟರಿ ಭವನ ಶಂಕರಪುರ ಇಲ್ಲಿ ಜರಗಿತು.

ನೂತನ 2022-23ನೇ ಸಾಲಿನ ಅಧ್ಯಕ್ಷರಾಗಿ‌ ಶ್ವೇತ ಪೂಜಾರಿ, ಕಾರ್ಯದರ್ಶಿ ಯಜ್ಞೇಶ್ ಎಂ ಹೆಗ್ಡೆ ಇವರಿಗೆ ರೋಟರಿ ಶಂಕರಪುರದ ಅಧ್ಯಕ್ಷರಾದ ಗ್ಲಾಡ್ಸನ್ ಕುಂದರ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ರೋಟರಾಕ್ಟ್ ಪ್ರತಿನಿಧಿ ಮಹಾಲಸಾ ಕಿಣಿ, ಉಪ DRCC RI DIST 3182 ಇದರ ಚಂದ್ರ ಪೂಜಾರಿ, DRCC RI DIST 3182 ಜೈ ವಿಠ್ಠಲ್, ಕ್ಲಬ್ ಅಧ್ಯಕ್ಷರಾದ ‌ಡೇನಿಯಲ್ ಸಿ ಅಮ್ಮಣ್ಣ, 2020-21ನೇ ಸಾಲಿನ ಕವನ್ ಪೂಜಾರಿ, ಕಾರ್ಯದರ್ಶಿ ಪ್ರೀತೇಶ್ ನೊರೊನ್ಹಾ ಉಪಸ್ಥಿತರಿದ್ದರು.