ಕಟಪಾಡಿ : ಇಲ್ಲಿನ ಕೋಟೆ ಜಾಮಿಯಾ ಮಸೀದಿ ಇದರ ನೂತನ ಅಧ್ಯಕ್ಷ ಬಿ.ಎಂ. ಮೊಹಿದ್ದೀನ್ ಎ.ಆರ್. ಮತ್ತು ಆಡಳಿತ ಸಮಿತಿಯ ಅಧಿಕಾರ ಸ್ವೀಕಾರ ಸಮಾರಂಭ ಶುಕ್ರವಾರ ನಡೆಯಿತು
ಕಟಪಾಡಿ ಮಸೀದಿಯನ್ನು ಮಾದರಿಯನ್ನಾಗಿಸಲಿ ಎಂದು ಬಹು| ಅಸ್ಸಯೈದ್ ಜಾಫರ್ ಸಾದಿಕ್ ತಂಗಳ್ ಕುಂಬೊಳ್ ಆಶೀರ್ವಚನ ಸಂದೇಶ ನೀಡಿದರು.
ಅಧಿಕಾರ ವಹಿಸಿಕೊಂಡ ನೂತನ ಅಧ್ಯಕ್ಷ ಬಿ.ಎಂ. ಮೊಹಿದ್ದೀನ್ ಎ.ಆರ್. ಮಾತನಾಡಿ, ವಕ್ಪ್ ಇಲಾಖೆಯ ಮೂರು ವರ್ಷದ ಆಡಳಿತದ ಬಳಿಕ ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷನಾಗಿ ಆಯ್ಕೆಗೊಂಡಿದ್ದು, ಸಭಾಭವನ, ಹಾಸ್ಟೆಲ್ ನಿರ್ಮಾಣ, ಶಾಲೆ ತೆರೆಯುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಇರಾದೆಯನ್ನು ಹೊಂದಿದ್ದು ಸಮಸ್ತರ ಸಹಕಾರ ಯಾಚಿಸಿದರು.
ಉಡುಪಿ ಜಿಲ್ಲಾ ವಕ್ ಸಲಹಾ ಸಮಿತಿ ಅಧ್ಯಕ್ಷ ಜನಾಬ್ ಸಿ.ಹೆಚ್. ಅಬ್ದುಲ್ ಮುತ್ತಲ್ಲಿ ವಂಡ್ಸೆ ಅಧ್ಯಕ್ಷತೆ ವಹಿಸಿದ್ದರು.
ಮಸೀದಿಯ ಖತೀಬರಾದ ಹಾಜಿ ಮುಹಮ್ಮದ್ ಬಶೀರ್ ಮದನಿ ಹಿತವಚನ ಬೋಧಿಸಿದರು. ಆಡಳಿತಾಧಿಕಾರಿ ಸೈಯ್ಯದ್ ಸಫೀಯುಲ್ಲಾ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರಿ ಅಬೂಬಕರ್ ಎಂ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭ ಉಡುಪಿ ಜಿಲ್ಲಾ ವಕ್ ಸಲಹಾ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್ಟ, ಸಲಹಾ ಸಮಿತಿ ಸದಸ್ಯ ಜುನೈದ್, ಸಿಬಂದಿ ಮುಜಾಹಿದ್ ಪಾಷ, ಮಸೀದಿಯ ಆಡಳಿತಾಧಿಕಾರಿ ಸೆಯ್ಯದ್ ಸಫೀಯುಲ್ಲಾ, ಉಪಾಧ್ಯಕ್ಷ ಜ|ಅಬ್ದುಲ್ ರಝಾಕ್ ವೈ.ಎಂ., ಕೋಶಾಧಿಕಾರಿ ಅಬ್ದುಲ್ ರಝಾಕ್ ಶಫಿ, ನೂತನ ಸದಸ್ಯರಾದ ಶೈಖ್ ಆಸಿಫ್, ಹಸೈನಾರ್ ಕೆ.ಪಿ.ಹೆಚ್., ಅಕ್ಬರ್ ಎ.ಆರ್., ಇಬ್ರಾಹೀಂ, ಸುಲೈಮಾನ್, ಶಾಹಿದ್, ಮೊಹಮ್ಮದ್ ವೇದಿಕೆಯಲ್ಲಿದ್ದರು.
ಇಕ್ಬಾಲ್ ಎಸ್.ಕೆ ಸ್ವಾಗತಿಸಿದರು. ಇಸ್ಮಾಯಿಲ್ ಹುಸೈನ್ ಶಫಿ ಕಟಪಾಡಿ ನಿರೂಪಿಸಿದರು. ಕಾರ್ಯದರ್ಶಿ ಮುಹಮ್ಮದ್ ಇಲ್ಯಾಸ್ ವಂದಿಸಿದರು.