ಪಡುಬಿದ್ರಿ : ಶ್ರೀಸತ್ಯದೇವಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಕಂಚಿನಡ್ಕ- ಪಡುಬಿದ್ರಿ ಇಲ್ಲಿಯ 2022-23ನೇ ಸಾಲಿನ ನೂತನ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗುರುಸ್ವಾಮಿಗಳಾದ ಕೃಷ್ಣ ಸಾಲ್ಯಾನ್, ಗುಣಕರ ಕೇರಿ ಮಾರ್ಗದರ್ಶನದಲ್ಲಿ ಗೌರವಾಧ್ಯಕ್ಷರಾಗಿ ಮೊನಪ್ಪ, ಮಾಧವ. ಅಧ್ಯಕ್ಷರಾಗಿ ಶಿವಪ್ಪ ಕಂಚಿನಡ್ಕ, ಉಪಾಧ್ಯಕ್ಷರಾಗಿ ಸಂಜೀವ ಕೇರಿ, ಶಂಕರ್, ರಮೇಶ್ ಜಿ.ಕೆ, ಪ್ರಭಾಕರ, ಗಣೇಶ್ ಪ್ರಸಾದ್. ಪ್ರಧಾನ ಕಾರ್ಯದರ್ಶಿ ಸಂತೋಷ್ ನಂಬಿಯಾರ್, ಕೋಶಾಧಿಕಾರಿಯಾಗಿ ಪವನ್ ಪಾದೆಬೆಟ್ಟು, ಸಂದೀಪ್ ಕೋಟ್ಯಾನ್. ಗೌರವ ಸಲಹೆಗಾರರಾಗಿ ಈಶ್ವರ, ಸುರೇಶ್, ಸುಂದರ್, ಕಿರಣ್ ಶೆಟ್ಟಿ. ಮಹಿಳಾ ಸಮಿತಿಯ ಪ್ರಮುಖರಾಗಿ ಸವಿತಾ ಶಿವಪ್ಪ ಆಯ್ಕೆಯಾಗಿದ್ದಾರೆ.