ಕಾಪು : ಭಾರತೀಯ ಜನತಾ ಪಾರ್ಟಿ ಕಾಪು ಕ್ಷೇತ್ರ ಮಹಿಳಾ ಮೋರ್ಚಾ ವತಿಯಿಂದ ಕೈ ಮಗ್ಗ ದಿನಾಚರಣೆಯನ್ನು ಆಚರಿಸಲಾಯಿತು.
ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳತ್ತೂರು ನಿವಾಸಿ ಲಕ್ಷ್ಮಣ್ ಶೆಟ್ಟಿಗಾರ್ ರವರ ಧರ್ಮಪತ್ನಿಯಾದ ಸರೋಜಿನಿ ಸುಮಾರು 37 ವರ್ಷದಿಂದ ಕೈಮಗ್ಗದ ಸೀರೆಯನ್ನು ನೆಯ್ಯುತ್ತಿದ್ದು,ಅವರನ್ನು ಇಂದು ಗುರುತಿಸಿ ಮಹಿಳಾ ಮೋರ್ಚಾದಿಂದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಶಿಲ್ಪ ಜಿ ಸುವರ್ಣ, ಕಾಪು ಕ್ಷೇತ್ರ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸುಮಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಖ ಶೈಲೇಶ್, ನೀತಾ ಗುರುರಾಜ್, ಕುತ್ಯಾರು ಪಂಚಾಯತ್ ಅಧ್ಯಕ್ಷರಾದ ಲತಾ ಆಚಾರ್ಯ, ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ರಮ ವೈ ಶೆಟ್ಟಿ, ಸೌಮ್ಯಲತ ಶೆಟ್ಟಿ, ಶಾಂತಾ ಪೂಜಾರಿ, ದಿವ್ಯ,ಅಗ್ನೇಶ್ ಉಪಸ್ಥಿತರಿದ್ದರು.