ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಬೆಳ್ಳಂಬೆಳಗ್ಗೆ 2 ಕಡೆಗಳಲ್ಲಿ ಬೆಂಕಿ ಅವಘಡ

Posted On: 10-08-2022 10:36AM

ಪಡುಬಿದ್ರಿ : ವಿದ್ಯುತ್ ಅವಘಡದಿಂದ ಪಡುಬಿದ್ರಿ ಠಾಣೆಯ ಪಕ್ಕದಲ್ಲಿರುವ ಅಕ್ವೇರಿಯಂ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿ ಹಾಗೂ ಕಣ್ಣಂಗಾರ್ ಸಮೀಪದ ಎಣ್ಣೆ ಗಿರಣಿ ಅಂಗಡಿಯ ತೆಂಗಿಕಾಯಿಗಳಿದ್ದ ಕೋಣೆ ಬೆಂಕಿಗಾಹುತಿಯಾದ ಘಟನೆ ಇಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ನಡೆದಿದೆ.

ಪಡುಬಿದ್ರಿ ಠಾಣೆಯ ಪಕ್ಕದಲ್ಲಿರುವ ಪಂಚಾಯತ್ ಕಟ್ಟಡದಲ್ಲಿರುವ ಅವಿಘ್ನ ಅಕ್ವೇರಿಯಂ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲಿಕರಾದ ದಿನೇಶ್ ಮಾತನಾಡಿ ವಿದ್ಯುತ್ ಶಾಟ್೯ ಸಕ್ಯು೯ಟ್ ಅಥವಾ ಇನ್ನಿತರ ಕಾರಣದ ಬಗ್ಗೆ ಇನ್ನಷ್ಟೆ ತಿಳಿಯಬೇಕಾಗಿದೆ. ಈ ಘಟನೆ ಬೆಳಿಗ್ಗೆ ನಡೆದಿದೆ. ಇದರಿಂದ ಸುಮಾರು 5-6 ಲಕ್ಷ ನಷ್ಟವಾಗಿದೆ ಎಂದರು.

ಪಡುಬಿದ್ರಿಯ ಕಣ್ಣಂಗಾರ್ ಸಮೀಪದ ಗಾಣಿಗ ಎಣ್ಣೆ ಗಿರಣಿಯಲ್ಲಿಯೂ ಬೆಳಿಗ್ಗೆ 6ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು ಸ್ಥಳೀಯರು ಮಾಲಿಕರಾದ ಸುಶೀಲ ಗಾಣಿಗರಿಗೆ ಮಾಹಿತಿ ನೀಡಿದ್ದಾರೆ. ಅಂದಾಜು 4-5 ಲಕ್ಷ ನಷ್ಟ ಅಂದಾಜಿಸಲಾಗಿದೆ.

ಅಗ್ನಿ ಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಮಾಡಿದೆ.