ಉಡುಪಿ :ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರಲು ಖಾಸಗಿ ಸಹಭಾಗಿತ್ವದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಅನುಷ್ಟಾನಗೊಳಿಸಲು ಗ್ರಾಮ-1 ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದ್ದು, ಉಡುಪಿ ಜಿಲ್ಲೆಯಲ್ಲೂ ಸಹ ಹಲವು ಗ್ರಾಮ-1 ಕೇಂದ್ರಗಳು ಪ್ರಾರಂಭಗೊಂಡು ಸಕ್ರಿಯವಾಗಿರುತ್ತದೆ.
75 ನೇ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವದ ಅಂಗವಾಗಿ "ಹರ್ ಘರ್ ತಿರಂಗ್" ಯೋಜನೆಯನ್ನು ಭಾರತ ಸರ್ಕಾರವು ರೂಪಿಸಿದ್ದು, ಉಡುಪಿ ಜಿಲ್ಲೆ ಅಲೆವೂರು, ಶಿರ್ವ, ವಾರಂಬಳ್ಳಿ, ವರಂಗ, ಯೆಡ್ತಾಡಿ, 80- ಬಡಗಬೆಟ್ಟು, ಮುದ್ರಾಡಿ ಹಾಗೂ ಕೆಮ್ಮಣ್ಣು ಗ್ರಾಮ-1 ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ತಿರಂಗ ಧ್ವಜವನ್ನು ವಿತರಣೆ ಮಾಡಲಾಯಿತು.