ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ಕಾಪು ಟು ಪಡುಬಿದ್ರಿ : ದೇಶಕ್ಕಾಗಿ ಓಟ
Posted On:
14-08-2022 11:52AM
ಪಡುಬಿದ್ರಿ : ಸ್ವಾತಂತ್ರ್ಯದ 75ರ ಅಮೃತ ಮಹೋತ್ಸವದ ಅಂಗವಾಗಿ ಕಾಪು ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ದೇಶಕ್ಕಾಗಿ ಓಟ ಕಾರ್ಯಕ್ರಮವು ಕಾಪು ರಾಷ್ಟ್ರೀಯ ಹೆದ್ದಾರಿ ಸಮೀಪದ ಸರಕಾರಿ ಶಾಲೆಯ ಸಮೀಪದಿಂದ ಪ್ರಾರಂಭಗೊಂಡು ಪಡುಬಿದ್ರಿ ಬೋಡ್೯ ಶಾಲಾ ಮೈದಾನದಲ್ಲಿ ಸಮಾಪ್ತಿಗೊಂಡಿತು.
ಈ ಸಂದರ್ಭ ಮಾತನಾಡಿದ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲು ಅವಕಾಶವಿದೆ. ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಸವಾಲನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿರಬೇಕು. ಸತತ ಪರಿಶ್ರಮದಿಂದ ಮುಂದೆ ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವಂತಾಗಲಿ ಎಂದು ಭಾಗವಹಿಸಿದ ಸ್ಪಧಾರ್ಥಿಗಳಿಗೆ ಶುಭ ಹಾರೈಸಿದರು.
ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ದೇಶವು ಯಾವ ರೀತಿ ಇರಬೇಕೆಂದು ಹಿರಿಯರು ನಿಶ್ಚಯಿಸಿದ್ದಾರೆ. ಪ್ರಧಾನಿಯವರ ಕರೆಯಂತೆ ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜ ರಾರಾಜಿಸುತ್ತಿದೆ. ಜನ ಸಂಭ್ರಮಿಸುತ್ತಿದ್ದಾರೆ. ದೇಶವನ್ನು ತುಂಡರಿಸಿದವರು ಮತ್ತು ರಾಷ್ಟ್ರ ಧ್ವಜದ ಬಣ್ಣವನ್ನೂ ತಿಳಿಯದವರು ಬಿಜೆಪಿಗೆ ಪಾಠ ಮಾಡುತ್ತಿದ್ದಾರೆ. ಮುಂದಿನ 25 ವರ್ಷ ಭಾರತದ ಅಮೃತಕಾಲ ಎಂದು ಪ್ರಧಾನಿಯವರ ಕರೆ ನೀಡಿದ್ದಾರೆ ಎಂದರು.
ಸುಮಾರು 11 ಕಿ.ಮೀ ಜರಗಿದ ಓಟದಲ್ಲಿ ಹಿರಿಯ ವಿಭಾಗದಲ್ಲಿ ಪುರುಷರು, ಮಹಿಳೆಯರು, ಯುವಕ, ಯುವತಿಯರು ಪಾಲ್ಗೊಂಡಿದ್ದರು.
ಯುವಕರ ವಿಭಾಗದಲ್ಲಿ ಪ್ರಥಮ ಅನಿಲ್ ಕೋಟ, ದ್ವಿತೀಯ ಸಚಿನ್, ತೃತೀಯ ಲಾರ ಫ್ರಾನ್ಸಿಸ್, ಚತುರ್ಥ ದಿನೇಶ್ ಉಡುಪಿ, ಪಂಚಮ ಸ್ಥಾನವನ್ನು ವಿಜಯಕುಮಾರ್ ನಗದು, ಪ್ರಶಸ್ತಿ ಪತ್ರದೊಂದಿಗೆ ಪಡೆದುಕೊಂಡರು.
ಯುವತಿಯರ ವಿಭಾಗದಲ್ಲಿ ಪ್ರಥಮ ಗಾಯತ್ರಿ, ದ್ವಿತೀಯ ಜಸ್ಮಿತ ಕೊಡಂಕಿಲ, ತೃತೀಯ ಕಾವೇರಿ, ಚತುರ್ಥ ಪವಿತ್ರ, ಪಂಚಮ ಸ್ಥಾನವನ್ನು ಪ್ರಿಯಾಂಕ ನಗದು, ಪ್ರಶಸ್ತಿ ಪತ್ರದೊಂದಿಗೆ ಪಡೆದುಕೊಂಡರು.
ಈ ಸಂದರ್ಭ ಶ್ರೀಶ ನಾಯಕ್, ನಯನ ಗಣೇಶ್, ಶಿಲ್ಪ ಸುವರ್ಣ, ಶ್ರೀಕಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಶಿಕಾಂತ್ ಪಡುಬಿದ್ರಿ, ನೀತಾ ಗುರುರಾಜ್, ರವಿ ಶೆಟ್ಟಿ ಪಡುಬಿದ್ರಿ, ಯಶೋಧ, ಸಂತೋಷ್, ಸುರೇಂದ್ರ ಪಣಿಯೂರು, ಸುಮಂಗಳ ಮತ್ತಿತರರು ಉಪಸ್ಥಿತರಿದ್ದರು.