ಬೆಳಪು : ಜಮಾ ಅತೆ ಇಸ್ಲಾಮಿ ಕಾಪು ವರ್ತುಲದ ವತಿಯಿಂದ ಉಚಿತ ಹಿಜಾಮ ಶಿಬಿರ
Posted On:
14-08-2022 06:11PM
ಕಾಪು : ಸೃಷ್ಟಿಕರ್ತನು ಮಾನವನನ್ನು ಭೂಮಿಯ ಮೇಲೆ ತನ್ನ ಪ್ರತಿನಿಧಿಯಾಗಿ ಕಳುಹಿಸಿ , ಕೆಡುಕನ್ನು ಅಳಿಸಿ ಒಳಿತನ್ನು ಸ್ಥಾಪಿಸಲು ಆದೇಶಿಸಿ , ಸ್ವಸ್ಥ ಸುಂದರ , ಆರೋಗ್ಯಪೂರ್ಣ ಸಮಾಜ ನಿರ್ಮಿಸಿ ರೋಗ ರುಜಿನ ಪೀಡಿತರ ಸೇವೆಗೈಯ್ಯಲು ತಿಳಿಸಿರುವನು. ನಿಮ್ಮಲ್ಲಿರುವ ಸಂಪತ್ತನ್ನು ಸೃಷ್ಟಿಕರ್ತನ ಸಂಪ್ರೀತಿ ಗಳಿಸಲು ಬಡವರ ಉದ್ಧಾರಕ್ಕೆ ಬಳಸಿದರೆ ಅದು ದೇವ ಮಾರ್ಗದಲ್ಲಿ ಬಳಸಿದಂತೆ ಎಂದು ಅನ್ವರ್ ಅಲಿ ಕಾಪು ಹೇಳಿದರು.
ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಲುವಾಗಿ ಜಮಾ ಅತೆ ಇಸ್ಲಾಮಿ ಕಾಪು ವರ್ತುಲದ ವತಿಯಿಂದ ಬೆಳಪು ಮಸ್ಜಿದ್ ಎ ತೈಬಾ ದಲ್ಲಿ ಉಚಿತ ಹಿಜಾಮ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಹಿಜಾಮ ಚಿಕಿತ್ಸೆ ನೀಡಲು ಬಂದಿರುವ ಆಯುಷ್ ಸರಕಾರಿ ಆಸ್ಪತ್ರೆ ಉಡುಪಿಯ ವೈದ್ಯಾಧಿಕಾರಿಯಾದ ಡಾಕ್ಟರ್ ರುಕ್ಸಾರ್ ಅಂಜುಮ್ ರವರು, ಈ ಚಿಕಿತ್ಸೆಯಿಂದ ಹಲವಾರು ಕಾಯಿಲೆಗಳು ಶಸ್ತ್ರ ಚಿಕಿತ್ಸೆ, ಮಾತ್ರೆ, ಔಷಧಿ ಸೇವಿಸದೆ ಗುಣ ಪಡಿಸಬಹುದಾಗಿದೆ ಹಾಗೂ ಇನ್ನೂ ಹಲವಾರು ಪ್ರಯೋಜನಗಳು ಇವೆ ಎಂದು ತಿಳಿಸಿದರು.
61 ಮಹಿಳೆಯರು 53 ಪುರುಷರು ಶಿಬಿರದಲ್ಲಿ ಹಿಜಾಮ ಚಿಕಿತ್ಸೆಯ ಪ್ರಯೋಜನ ಪಡೆದರು. ವೇದಿಕೆಯಲ್ಲಿ ರಫೀಕ್ ಖಾನ್, ಮುಸ್ತಾಕ್ ಇಬ್ರಾಹೀಮ್ ಉಪಸ್ಥಿತರಿದ್ದರು.
ಮಸೀದಿಯ ಗುರುಗಳಾದ, ಮೌಲಾನಾ ಮುಹಮ್ಮದ್ ಫಾರೂಕ್ ರವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭ ಆಯಿತು.
ಶೇಹೆನಾಜ್ , ಬೀಬಿ ಬತುಲ್, ಸಕ್ಲೇನ್ ಪಾಷ , ಅಬ್ದುಲ್ ಅಹದ್, ಸರ್ಫರಾಜ್ ಸಹಕರಿಸಿದರು.
ಮುಹಮ್ಮದ್ ಇಕ್ಬಾಲ್ ಸಾಹೇಬ್ ಸ್ವಾಗತಿಸಿದರು.
ಇಬ್ರಾಹೀಮ್ ಸಯೀದ್ ಉಮರಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.